ಯುವ ಸಂಘಟನೆಗಳಿಂದ ಸಮಾಜದ ಜಾಗೃತಿ

ಕಿನ್ನಿಗೋಳಿ : ಯುವ ಸಂಘಟನೆಗಳಿಂದ ಸಮಾಜದ ಬಗ್ಗೆ ಜಾಗೃತಿ ಮೂಡಬೇಕು. ಸಮಾಜದ ಎಲ್ಲಾ ವರ್ಗದ ಜನತೆಗೂ ಸೇವೆ ನೀಡುವ ಕಲ್ಪನೆ ಬೆಳೆಯಲಿ ಎಂದು ಮೂಲ್ಕಿ ವಿಜಯಾ ಕಾಲೇಜು ಪ್ರಿನ್ಸಿಪಾಲ್ ಡಾ.ಕೆ. ನಾರಾಯಣ ಪೂಜಾರಿ ಹೇಳಿದರು.
ತೋಕೂರು ಯುವಕ ಸಂಘ ಮತ್ತು ಮಹಿಳಾ ಮಂಡಲದ ಜಂಟಿ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೀತಾರಾಮ್ ಕುಮಾರ್ ಕಟೀಲು ಅವರನ್ನು ಸನ್ಮಾನಿಸಲಾಯಿತು.
10 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಬಡ ವಿದ್ಯಾರ್ಥಿನಿಗೆ 50 ಸಾವಿರ ರೂ.ಗಳ ವಿದ್ಯಾನಿಧಿ ಸಾಲ ಸೌಲಭ್ಯ, ಅಶಕ್ತಿ ಬಡ ಕುಟುಂಬದ ಮಗುವಿನ ವೈದ್ಯಕೀಯ 15 ಸಾವಿರ ರೂ.ಗಳ ನೆರವಿಗಾಗಿ, ವಿವಿಧ ಸ್ಪರ್ಧಾ ಕೂಟದ ವಿಜೇತರಿಗೆ ಬಹುಮಾನ, ಡಾ.ದಯಾನಂದ ಎಸ್. ರಾವ್ ಮೆಮೋರಿಯಲ್ ದತ್ತಿ ನಿಧಿ ಪ್ರಶಸ್ತಿ ಹಾಗೂ 5 ಸಾವಿರ ರೂ.ಗಳ ನೆರವನ್ನು ಸಿಂಧು ಎಸ್. ರೈ ಅವರಿಗೆ ನೀಡಿ ಗೌರವಿಸಲಾಯಿತು.
ಬೈಕಂಪಾಡಿ ರೋಟರಿ ಕ್ಲಬ್‌ನ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಉದ್ಯಮಿ ಪುಂಡಲೀಕ ಹೊಸಬೆಟ್ಟು, ಮಹಿಳಾ ಮಂಡಲದ ಅಧ್ಯಕ್ಷ ವಿಪುಲಾ ಡಿ. ಶೆಟ್ಟಿಗಾರ್ ಉಪಸ್ಥಿತರಿದ್ದರು.
ತೋಕೂರು ಯುವಕ ಸಂಘದ ಅಧ್ಯಕ್ಷ ಹೇಮನಾಥ ಅಮೀನ್ ಸ್ವಾಗತಿಸಿದರು, ಸತೀಶ್ ಭಟ್ ವರದಿ ವಾಚಿಸಿದರು, ಮಾಜಿ ಅಧ್ಯಕ್ಷ ಹರಿದಾಸ್ ಭಟ್ ಕಾರ್ಯಕ್ರಮ ನಿರೂಪಿಸಿದರು.

Kinnigoli-12031903

Comments

comments

Comments are closed.

Read previous post:
Kinnigoli-12031902
ಕ್ರೀಡೆ, ಕಲೆಗೆ ವಿಶೇಷ ಪ್ರೋತ್ಸಾಹ ಸಿಗಲಿ

ಕಿನ್ನಿಗೋಳಿ : ಕ್ರೀಡೆ ಹಾಗೂ ಕಲೆಗೆ ಗ್ರಾಮಾಂತರ ಪ್ರದೇಶದ ಸುಪ್ತ ಪ್ರತಿಭೆಗಳಿಗೆ ಸಂಘ ಸಂಸ್ಥೆಗಳು ಸೂಕ್ತ ವೇದಿಕೆ ನೀಡಬೇಕು ಎಂದು ಬೆಂಗಳೂರು ಪ್ರತಿ ರೂಪಿ ಸಂಸ್ಥೆಯ ಸಿ.ಇ.ಓ ತೋಕೂರು...

Close