ರಾಜರತ್ನಪುರ : ಮಹಿಳಾ ದಿನಾಚರಣೆ

ಕಿನ್ನಿಗೋಳಿ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಸಂಘಟನಾ ಶಕ್ತಿಯಿಂದ ಸಮಾಜ ಅಭಿವೃದ್ದಿ ಕಾರ್ಯಗಳನ್ನು ಮಾಡುವಲ್ಲಿ ಮುತುವರ್ಜಿ ವಹಿಸಬೇಕು ಎಂದು ಮುಂಡ್ಕೂರು ಭಾರ್ಗವ ಜೇಸಿಸ್ ನಿಕಟಪೂರ್ವ ಅಧ್ಯಕ್ಷೆ ಅರುಣ ಕುಲಾಲ್ ಹೇಳಿದರು.
ಕಿನ್ನಿಗೋಳಿ ರಾಜರತ್ನಪುರ ಸರಾಫ್ ಅಣ್ಣಯ್ಯಾಚಾರ್ ಸಭಾಭವನದಲ್ಲಿ ಶ್ರೀ ಕಾಳಿಕಾಂಬ ಮಹಿಳಾ ವೃಂದ ಆಯೋಜಿಸಿದ ವಿಶ್ವ ಮಹಿಳಾ ದಿನಾಚರಣೆ ಸಂದರ್ಭ ಮಾತನಾಡಿದರು
ಈ ಸಂದರ್ಭ ಶ್ರೀ ಕಾಳಿಕಾಂಬ ಮಹಿಳಾ ವೃಂದದ ಅಧ್ಯಕ್ಷೆ ಗೀತಾ ಯೋಗೀಶ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಅಧ್ಯಕ್ಷ ಉದಯ ಕುಮಾರ್ ಆಚಾರ್ಯ, ಸರಾಫ್ ಅಣ್ಣಯ್ಯಾ ಆಚಾರ್ಯ ಸಭಾಭವನ ಸಮಿತಿ ಅಧ್ಯಕ್ಷ ಪ್ರಥ್ವಿರಾಜ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ರೇಣುಕಾ ಹರೀಶ್ ಸ್ವಾಗತಿಸಿದರು. ವಾಣಿ ಗೋಪಾಲ್ ಬಹುಮಾನಿತರ ಪಟ್ಟಿ ವಾಚಿಸಿದರು. ಶಶಿಕಲಾ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು.

Kinnigoli-13031901

Comments

comments

Comments are closed.

Read previous post:
Kinnigoli-12031904
ಧಾರ್ಮಿಕ ಕ್ಷೇತ್ರಗಳಲ್ಲಿ ಶಾಂತಿ, ಭಕ್ತಿ ಹೆಚ್ಚಬೇಕು

ಕಿನ್ನಿಗೋಳಿ : ಧಾರ್ಮಿಕ ಕ್ಷೇತ್ರಗಳಲ್ಲಿ ಶಾಂತಿ, ಭಕ್ತಿ ಹೆಚ್ಚಬೇಕು. ತುಳುನಾಡಿನ ಮಣ್ಣಿನಲ್ಲಿ ಧಾರ್ಮಿಕತೆಯಿಂದ ಸಂಸ್ಕೃತಿ ಮತ್ತು ಸಂಸ್ಕಾರಗಳು ಸಂಪನ್ನಗೊಂಡಿವೆ ಎಂದು ಮೂಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು...

Close