ಹಳೆಯಂಗಡಿ ಲಯನ್ಸ್, ಲಿಯೋ ಕ್ಲಬ್‌ಗೆ ಭೇಟಿ

ಕಿನ್ನಿಗೋಳಿ : ಕೃಷಿ ಬದುಕನ್ನು ಉಳಿಸಲು ಲಯನ್ಸ್ ಕ್ಲಬ್ ವೇದಿಕೆಯನ್ನು ನಿರ್ಮಿಸಿದ್ದರಿಂದ ಜಿಲ್ಲೆಯಲ್ಲಿ ಅನೇಕ ಕೃಷಿ ಚಟುವಟಿಕೆ ಪುನರರಾಂಭಗೊಂಡಿದೆ. ಸರ್ಕಾರ ಮತ್ತು ಜನಪ್ರತಿನಿಧಿಗಳ ಕೆಲಸವನ್ನು ಲಯನ್ಸ್ ಸಂಸ್ಥೆಯ ಮೂಲಕ ಮಾಡಲಾಗುತ್ತಿದೆ ಎಂದು ಜಿಲ್ಲಾ ಲಯನ್ಸ್ ಗವರ್ನರ್ ದೇವದಾಸ್ ಭಂಡಾರಿ ಹೇಳಿದರು.
ಹಳೆಯಂಗಡಿ ಲಯನ್ಸ್ ಮತ್ತು ಲಿಯೋ ಕ್ಲಬ್‌ಗೆ ಅಧಿಕೃತ ಭೇಟಿ ಸಂದ ಸುರತ್ಕಲ್‌ನ ಸೂರಜ್ ಇಂಟರ್‌ನ್ಯಾಷನಲ್ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಳೆಯಂಗಡಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಯಶೋಧರ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಆದರ್ಶ ಕೃಷಿಕರಾದ ಸುಧಾಕರ ಜೆ. ಸುವರ್ಣ, ಪದ್ಮನಾಭ ಬಂಗೇರ, ಗ್ಲಾಡಿನ್ ಕರ್ಕಡ ಅವರನ್ನು ಸನ್ಮಾನಿಸಲಾಯಿತು.
ಹಳೆಯಂಗಡಿ ಪಶುವೈದ್ಯಕೀಯ ಕೇಂದ್ರಕ್ಕೆ ವಿದ್ಯುತ್ ಜೋಡಣೆ, ಪಾವಂಜೆ ಬಸ್ ನಿಲ್ದಾಣಕ್ಕೆ ನಾಮ ಫಲಕ, ಎಲ್‌ಇಡಿ ದಾರಿ ದೀಪ, ೧೦ನೇ ತೋಕೂರು ಶ್ರೀ ಸುಬ್ರಹ್ಮಣ್ಯ ಸರ್ಕಾರಿ ಶಾಲೆಗೆ ಕಂಪ್ಯೂಟರ್ ಟೇಬಲ್ ಕೊಡುಗೆ, ಎಕ್ಸ್‌ಪ್ರೆಸ್ ವೇಳಾಪಟ್ಟಿ, ಮೊಹಿಯುದ್ದೀನ್ ಚೇಳ್ಯಾರು ಇವರ ಕಣ್ಣಿನ ಚಿಕಿತ್ಸೆಗೆ ನೆರವು, ಸುರತ್ಕಲ್ ಲಯನ್ಸ್ ಸ್ಪೆಷಲ್ ಸ್ಕೂಲ್‌ಗೆ ಧನ ಸಹಾಯ, ಜಿಲ್ಲಾ ಲಯನ್ಸ್ ಕ್ಲಬ್‌ನ ಯೋಜನೆಗೆ ಧನ ಸಹಾಯ ವಿತರಿಸಲಾಯಿತು.
ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ನಾನಿಲ್ ಮತ್ತು ಜಯಶ್ರಿ, ಜಿಲ್ಲಾ ಗವರ್ನರ್ ದೇವದಾಸ್ ಭಂಡಾರಿ ಮತ್ತು ಜಿಲ್ಲಾ ಪ್ರಥಮ ಮಹಿಳೆ ಸುಖಲತಾ ಭಂಡಾರಿ ಹಾಗೂ ಜಿಲ್ಲಾ ಲಿಯೋ ಕ್ಲಬ್ ಅಧ್ಯಕ್ಷೆ ಪಲ್ಲವಿ ಪೈ ಅವರನ್ನು ಗೌರವಿಸಲಾಯಿತು.
ರೋನಾಲ್ಡ್ ಗೋಮ್ಸ್, ಡಾ.ಗೀತ್‌ಪ್ರಕಾಶ್, ಉದಯ ಅಮೀನ್ ಮಟ್ಟು, ಬಾಲಕೃಷ್ಣ ಶೆಟ್ಟಿ, ವಿಲಿಯಂ ಮಸ್ಕರೇನಸ್, ಮೂಲ್ಕಿ ಸದಾಶಿವ ಹೊಸದುರ್ಗಾ, ಸುರತ್ಕಲ್ ಕೇಶವ ಸಾಲ್ಯಾನ್, ಕಿನ್ನಿಗೋಳಿ ಲಿಯೋ ಡಾನಿ ಮಿನೇಜಸ್, ಮುಚ್ಚೂರು ನೀರುಡೆ ಪ್ರದೀಪ್ ಶೆಟ್ಟಿ, ನ್ಯೂ ಮಂಗಳೂರ್‌ನ ಮನೋಜ್‌ಕುಮಾರ್, ಗುರುಪುರ ಕೈಕಂಬದ ಜೇಮ್ಸ್, ಕಾಟಿಪಳ್ಳ ಕೃಷ್ಣಾಪುರದ ಮಾಧವ ಶೆಟ್ಟಿ, ವಾಸು ನಾಯ್ಕ್, ನೇಹಾ ವೈ. ದೇವಾಡಿಗ, ಸೌರಬ್ ಬಿ. ಸಾಲ್ಯಾನ್, ಚಿರಾಗ್ ಜೆ. ಕೋಟ್ಯಾನ್, ರಾಕೇಶ್ ಸಾಲ್ಯಾನ್, ಡಾ.ಗಣೇಶ್ ಅಮೀನ್ ಸಂಕಮಾರ್, ಯಾದವ ದೇವಾಡಿಗ, ಜಯಾನಂದ ಸುವರ್ಣ, ಭಾಸ್ಕರ ಸಾಲ್ಯಾನ್, ಬ್ರಿಜೇಶ್‌ಕುಮಾರ್, ಶರತ್‌ಕುಮಾರ್, ರಮೇಶ್ ರಾಥೋಡ್, ರಶ್ಮಿ ಉಪಸ್ಥಿತರಿದ್ದರು.

Kinnigoli-14031903

Comments

comments

Comments are closed.

Read previous post:
Kinnigoli-14031902
ಕಿನ್ನಿಗೋಳಿ ಮಸೀದಿ ಸಮಿತಿಯ ಪದಾಧಿಕಾರಿ ಆಯ್ಕೆ

ಕಿನ್ನಿಗೋಳಿ : ಕಿನ್ನಿಗೋಳಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಆಡಳಿತ ಮಂಡಳಿ ಸಮಿತಿ ಸಭೆಯು ಇತ್ತೀಚೆಗೆ ಮಸೀದಿಯಲ್ಲಿ ಕೆ.ಎ.ಅಬ್ದುಲ್ಲ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ 2019-20 ನೇ ಸಾಲಿನ ಕಾರ್ಯಕಾರಿ ಸಮಿತಿಯ...

Close