ಕಿನ್ನಿಗೋಳಿ ಮಸೀದಿ ಸಮಿತಿಯ ಪದಾಧಿಕಾರಿ ಆಯ್ಕೆ

ಕಿನ್ನಿಗೋಳಿ : ಕಿನ್ನಿಗೋಳಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಆಡಳಿತ ಮಂಡಳಿ ಸಮಿತಿ ಸಭೆಯು ಇತ್ತೀಚೆಗೆ ಮಸೀದಿಯಲ್ಲಿ ಕೆ.ಎ.ಅಬ್ದುಲ್ಲ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ 2019-20 ನೇ ಸಾಲಿನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಫ್ಲವರ್ ಮುಹಮ್ಮದ್ ರಫೀಕ್ ಕಿನ್ನಿಗೋಳಿ ಅವರನ್ನು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಕಿನ್ನಿಗೋಳಿ, ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಜೊತೆ ಕಾರ್ಯದರ್ಶಿ ಹಬೀಬ್ ಅತ್ತೂರು, ಕೋಶಾಧಿಕಾರಿ ಮುನೀರ್, ಗೌರವಾಧ್ಯಕ್ಷ ಅಬ್ದುಲ್ ರಝಾಕ್ ಗೋಳಿಜೋರ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಾಜಿ ಟಿ.ಎಚ್.ಮಯ್ಯದ್ದಿ, ಕೆ.ಎ.ಅಬ್ದುಲ್ಲ, ಹಿದಾಯತುಲ್ಲ, ರಫೀಕ್, ದೀಪ್ ರಾಜ್ ಅಬ್ಬು, ಆರಿಫ್ ಟಿ.ಎಚ್., ಫಯಾಝ್, ಶಬೀರ್ ಕಿನ್ನಿಗೋಳಿ, ಮುಸ್ತಫಾ ಕಾಫಿಕಾಡ್, ಅಬ್ದುಲ್ ಖಾದರ್ ಆಯ್ಕೆಯಾದರು.

Kinnigoli-14031902

Comments

comments

Comments are closed.

Read previous post:
Kinnigoli-14031901
ಶಾಲಾ ಮುಖ್ಯ ಶಿಕ್ಷಕಿ ವಿದಾಯ ಸಮಾರಂಭ

ಮುಲ್ಕಿ : ಕಳೆದ 40 ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿ ಸಾರ್ಥಕ ಸೇವೆ ಸಲ್ಲಿಸಿ ಮಕ್ಕಳನ್ನು ಪ್ರೀತಿ ವಿಶ್ವಾಸದಿಂದ ಬೆಳೆಸಿ ದೇಶದ ಸತ್ಪ್ರಜೆಗಳಾಗಿ ರೂಪಿಸಿ ನಿವೃತ್ತಿಗೊಳ್ಳುತ್ತಿರುವ ಶಾಲಾ ಮುಖ್ಯ...

Close