ಕಿರುತೆರೆಯಲ್ಲಿ ಸಾಕಷ್ಟು ಅವಕಾಶಗಳಿವೆ

ಕಿನ್ನಿಗೋಳಿ : ಕರಾವಳಿಯ ಜಿಲ್ಲೆಯಲ್ಲಿನ ಜನರು ಭಾಷಾ ಶುದ್ಧಿ, ಬರವಣಿಗೆ, ಸಾಹಿತ್ಯ ಪ್ರಜ್ಞೆ, ಸಂಸ್ಕಾರ ಇತ್ಯಾದಿಗಳನ್ನು ಯಕ್ಷಗಾನ, ನಾಟಕ, ಸಂಗೀತಗಳಂತಹ ಸಾಂಸ್ಕೃತಿಕ ಚಟುವಟಿಕೆಗಳ ಪ್ರಭಾವದಿಂದ ಪಡೆಯುತ್ತಿದ್ದಾರೆ. ಪತ್ರಿಕೆ, ನ್ಯೂಸ್ ಚಾನೆಲ್‌ಗಳ ಹೊರತಾಗಿ ಅವಕಾಶಗಳನ್ನು ಕಿರುತೆರೆಯಲ್ಲಿ ಪಡೆಯುವ ಸಾಧ್ಯತೆಗಳು ಹೆಚ್ಚಿವೆ ಎಂದು ಟಿವಿ ಧಾರಾವಾಹಿಗಳ ಚಿತ್ರಕಥಾಗಾರ, ಸಾಹಿತಿ ಶ್ರೀನಿಧಿ ಡಿ.ಎಸ್. ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು ಎನ್‌ಎಸ್‌ಎಸ್ ಘಟಕ ಹಾಗೂ ರೆಡ್ ಕ್ರಾಸ್ ಸಹಯೋಗದಲ್ಲಿ ನಡೆದ ಮಾಧ್ಯಮ ವಾಸ್ತವ ಮತ್ತು ಭ್ರಮೆಗಳ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.
ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸುವ ಮೂಲಕ ಹಳ್ಳಿಗಳ ಸುಪ್ತ ಪ್ರತಿಭೆಗಳು ನಗರಗಳಲ್ಲಿ ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು. ಹೈಸ್ಕೂಲು ಕಾಲೇಜು ದಿನಗಳಿಂದಲೇ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಯುವ ಜನಾಂಗದಲ್ಲಿ ಓದುವ ಹವ್ಯಾಸ ಬೇಕು ಎಂದು ಶ್ರೀನಿಧಿ ಡಿ.ಎಸ್. ಹೇಳಿದರು.
ಕಾಲೇಜು ಪ್ರಿನ್ಸಿಪಾಲ್ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ, ಎನ್‌ಎಸ್ ಎಸ್ ಅಧಿಕಾರಿಗಳಾದ ಡಾ. ಗಣಪತಿ ಭಟ್, ಪ್ರೊ. ಪರಮೇಶ್ವರ್, ರೆಡ್ ಕ್ರಾಸ್‌ನ ಪ್ರೊ. ಸುರೇಶ್, ಎನ್. ಎಸ್ ಎಸ್ ವಿದ್ಯಾರ್ಥಿ ನಾಯಕರು ವೇದಿಕೆಯಲ್ಲಿದ್ದರು.

Kinnigoli-14031904

Comments

comments

Comments are closed.

Read previous post:
Kinnigoli-14031903
ಹಳೆಯಂಗಡಿ ಲಯನ್ಸ್, ಲಿಯೋ ಕ್ಲಬ್‌ಗೆ ಭೇಟಿ

ಕಿನ್ನಿಗೋಳಿ : ಕೃಷಿ ಬದುಕನ್ನು ಉಳಿಸಲು ಲಯನ್ಸ್ ಕ್ಲಬ್ ವೇದಿಕೆಯನ್ನು ನಿರ್ಮಿಸಿದ್ದರಿಂದ ಜಿಲ್ಲೆಯಲ್ಲಿ ಅನೇಕ ಕೃಷಿ ಚಟುವಟಿಕೆ ಪುನರರಾಂಭಗೊಂಡಿದೆ. ಸರ್ಕಾರ ಮತ್ತು ಜನಪ್ರತಿನಿಧಿಗಳ ಕೆಲಸವನ್ನು ಲಯನ್ಸ್ ಸಂಸ್ಥೆಯ ಮೂಲಕ...

Close