ಶಾಲಾ ಮುಖ್ಯ ಶಿಕ್ಷಕಿ ವಿದಾಯ ಸಮಾರಂಭ

ಮುಲ್ಕಿ : ಕಳೆದ 40 ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿ ಸಾರ್ಥಕ ಸೇವೆ ಸಲ್ಲಿಸಿ ಮಕ್ಕಳನ್ನು ಪ್ರೀತಿ ವಿಶ್ವಾಸದಿಂದ ಬೆಳೆಸಿ ದೇಶದ ಸತ್ಪ್ರಜೆಗಳಾಗಿ ರೂಪಿಸಿ ನಿವೃತ್ತಿಗೊಳ್ಳುತ್ತಿರುವ ಶಾಲಾ ಮುಖ್ಯ ಶಿಕ್ಷಕಿ ಭಗಿನಿ.ಗ್ರೇಸಿ ಬಿ.ಎಸ್.ರವರ ಕಾರ‍್ಯ ಶ್ಲಾಘನೀಯ ಎಂದು ಮುಲ್ಕಿ ಇಮಾಕ್ಯುಲೇಟ್ ಕನ್ಸೆಪ್‌ಷನ್ ಚರ್ಚ್‌ನ ಧರ್ಮಗುರು ವಂ. ಫಾ. ಸಿಲ್ವೆಸ್ಟರ್ ಡಿ’ಕೊಸ್ತಾ ಹೇಳಿದರು.

ಮುಲ್ಕಿ ಮೆಡಲಿನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 40 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಶಾಲಾ ಮುಖ್ಯ ಶಿಕ್ಷಕಿ ಗ್ರೇಸಿ ಬಿಎಸ್ ರವರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ನಡೆದ ಕೃತಜ್ಞತಾಪೂರ್ವಕ ವಿದಾಯ ಸನ್ಮಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ಪ್ರಾಂತೀಯ ಮುಖ್ಯಸ್ಥೆ ಹಾಗೂ ಕಾರ್ಪೋರೆಟ್ ಮ್ಯಾನೇಜರ್ ಭಗಿನಿ ಸಿಸಿಲಿಯಾ ಮೆಂಡೋನ್ಸಾ ಬಿಎಸ್ ಮಾತನಾಡಿ ಶಿಕ್ಷಕಿಯಾಗಿ ಕಳೆದ ಹಲವಾರು ವರ್ಷಗಳಿಂದ ಸಂಸ್ಥೆಯ ಕೀರ್ತಿ ಶಿಖರಕ್ಕೇರಿಸಿದ ಭಗಿನಿ ಗ್ರೇಸಿಯವರ ಸಾದನೆ ಅವಿಸ್ಮರಣೀಯ ಎಂದು ಹೇಳಿದರು.

ಮಂಗಳೂರು ರೋಶನಿ ನಿಲಯದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಚೈಲ್ಡ್‌ಲೈನ್ ಕೊರ್ಡಿನೆಟರ್ ಶ್ರೀಮತಿ ಸವಿತಾ ಡಿಸೋಜ, ಕಿನ್ನಿಗೋಳಿ ಲಿಟ್ಲ್ ಫ್ಲವರ್ ಶಾಲೆಯ ನಿವೃತ್ತ ಶಿಕ್ಷಕಿ ಶ್ರೀಮತಿ ಸೆಲಿನ್ ಪಿಂಟೋ, ಮುಲ್ಕಿ ಕ್ಲಸ್ಟರ್ ಸಿಆರ್‌ಪಿ ನೀತಾ ತಂತ್ರಿ, ಶಾಲಾ ಸಂಚಾಲರಾದ ಭಗಿನಿ ಡಿವಿನಾ ಬಿಎಸ್, ಮೆಡಲಿನ್ ಕಾನ್ವೆಂಟ್ ಸುಪೀರಿಯರ್ ಭಗಿನಿ ನಂದಿತಾ ಬಿಎಸ್, ಶಾಲಾ ಮುಖ್ಯೋಪಾದ್ಯಾಯಿನಿ ಪ್ರೆಸಿಲ್ಲಾ ಡಿಸೋಜಾ ಬಿಎಸ್, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಕಾಂತ್ ಭಟ್, ಉದ್ಯಮಿ ವಿಕ್ಟರ್ ಸಂತು ಮಯೋರಾ, ಪಾವ್ಲ್ ಸಂತು ಮಯೋರಾ, ವಲೇರಿಯನ್ ರೋಡ್ರೀಗಸ್, ರೊನಾಲ್ಡ್ ಕರ್ಕಡ, ನಿವೃತ್ತ ಶಿಕ್ಷಕಿ ಹಿಲ್ಡಾ ಮತ್ತಿತರರು ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾದ್ಯಾಯಿನಿ ಭಗಿನಿ ಪ್ರೆಸಿಲ್ಲಾ ಸ್ವಾಗತಿಸಿದರು, ಶಿಕ್ಷಕಿ ಕೋನಿ ಪಿ ವಾಸ್ ಕಾರ‍್ಯಕ್ರಮ ನಿರೂಪಿಸಿದರು.

Kinnigoli-14031901

Comments

comments

Comments are closed.

Read previous post:
Kinnigoli-13031901
ರಾಜರತ್ನಪುರ : ಮಹಿಳಾ ದಿನಾಚರಣೆ

ಕಿನ್ನಿಗೋಳಿ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಸಂಘಟನಾ ಶಕ್ತಿಯಿಂದ ಸಮಾಜ ಅಭಿವೃದ್ದಿ ಕಾರ್ಯಗಳನ್ನು ಮಾಡುವಲ್ಲಿ ಮುತುವರ್ಜಿ ವಹಿಸಬೇಕು ಎಂದು ಮುಂಡ್ಕೂರು ಭಾರ್ಗವ ಜೇಸಿಸ್ ನಿಕಟಪೂರ್ವ ಅಧ್ಯಕ್ಷೆ ಅರುಣ...

Close