ಮತದಾರರ ಜಾಗೃತಿ ಕಾರ್ಯಕ್ರಮ (ಸ್ವೀಪ್)

ಕಿನ್ನಿಗೋಳಿ : ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ದೇಶದ 2019ನೇ ಲೋಕಸಭಾ ಚುನಾವಣೆಯ ಪ್ರಯುಕ್ತ ಮಂಗಳೂರು ತಾಲೂಕು ಪಂಚಾಯತ್‌ನ ಕಾರ್ಯನಿರ್ವಹಣಾ ಅಧಿಕಾರಿ ರಘು, ಎ.ಇ. ಮತದಾರರ ಜಾಗೃತಿ ಕಾರ್ಯಕ್ರಮವನ್ನು ತಪೋವನ, ತೋಕೂರಿನ ಮೂಲ್ಕಿ ರಾಮಕೃಷ್ಣ ಪೂಂಜಾ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆಸಿಕೊಟ್ಟರು.
ಪಡುಪಣಂಬೂರು ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಿತ ಕ್ಯಾಥರಿನ್, ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಿನ್ಸಿಪಾಲ್ ವೈ.ಎನ್.ಸಾಲಿಯಾನ್, ತರಬೇತಿ ಅಧಿಕಾರಿ ಲಕ್ಷ್ಮೀಕಾಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ವಿದ್ಯಾರ್ಥಿಗಳು, ಪಂಚಾಯತ್ ವ್ಯಾಪ್ತಿಯ ವಿವಿಧ ಶಾಲೆಯ ಶಿಕ್ಷಕ ವೃಂದದವರು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರುಗಳು, ಸಂಸ್ಥೆಯ ಸಿಬ್ಬಂದಿ ವರ್ಗದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

Kinnigoli-16031903

Comments

comments

Comments are closed.

Read previous post:
Kinnigoli-16031902
ಪುಲ್ವಾಮ ವೀರ ಯೋಧರಿಗೆ ತಿಂಗಳ ನಮನ

ಕಿನ್ನಿಗೋಳಿ : ದೇಶಪ್ರೇಮ ಎಲ್ಲಾ ವಿದ್ಯಾರ್ಥಿಗಳಲ್ಲಿ ಎಂದೆಂದಿಗೂ ಜೀವಂತರಾಗಿರಬೇಕು, ದೇಶಕ್ಕಾಗಿ ತ್ಯಾಗಮಾಡಿದವರ ತ್ಯಾಗವನ್ನು ಸ್ಮರಿಸಬೇಕು. ಮೊದಲು ನಾವು ಭಾರತೀಯರಾಗಿ ಬದುಕೋಣ ಎಂದು ಪೊಂಪೈ ಕಾಲೇಜಿನ ನ್ಯಾಕ್ ಘಟಕದ ಸಂಚಾಲಕ...

Close