ಪುಲ್ವಾಮ ವೀರ ಯೋಧರಿಗೆ ತಿಂಗಳ ನಮನ

ಕಿನ್ನಿಗೋಳಿ : ದೇಶಪ್ರೇಮ ಎಲ್ಲಾ ವಿದ್ಯಾರ್ಥಿಗಳಲ್ಲಿ ಎಂದೆಂದಿಗೂ ಜೀವಂತರಾಗಿರಬೇಕು, ದೇಶಕ್ಕಾಗಿ ತ್ಯಾಗಮಾಡಿದವರ ತ್ಯಾಗವನ್ನು ಸ್ಮರಿಸಬೇಕು. ಮೊದಲು ನಾವು ಭಾರತೀಯರಾಗಿ ಬದುಕೋಣ ಎಂದು ಪೊಂಪೈ ಕಾಲೇಜಿನ ನ್ಯಾಕ್ ಘಟಕದ ಸಂಚಾಲಕ ಪ್ರೊ. ಯೋಗಿಂದ್ರ ಬಿ ಹೇಳಿದರು.
ಪೊಂಪೈ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯೂತ್ ರೆಡ್ ಕ್ರಾಸ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಪುಲ್ವಾಮದಲ್ಲಿ ವೀರಮರಣವನ್ನಪ್ಪಿದ ವೀರಯೋಧರ ತಿಂಗಳ ಸಂಸ್ಮರಣ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದರು.
ಭಾರತರತ್ನ ಲತಾ ಮಂಗೇಷ್ಕರ್ ಹಾಡಿದ ದೇಶಪ್ರೇಮ ಉದ್ದೀಪನಗೊಳಿಸುವ ಹಾಡನ್ನು ಕಾರ್ಯಕ್ರಮದ ಆರಂಭದಲ್ಲಿ ಪ್ರಸಾರ ಮಾಡಲಾಯಿತು. .
ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಕೆ. ಜಗದೀಶ ಹೊಳ್ಳ ಪುಲ್ವಾಮದಲ್ಲಿ ಮಡಿದ ವೀರ ಯೋಧರ ತ್ಯಾಗ ಬಲಿದಾನಗಳ ಬಗ್ಗೆ ಉಪನ್ಯಾಸವಿತ್ತರು.
ಘಟಕಗಳ ಪ್ರತಿಯೊಬ್ಬ ಸ್ವಯಂಸೇವಕರು ವೀರಯೋಧರ ತ್ಯಾಗಬಲಿದಾನಗಳನ್ನು ಬಿಂಬಿಸುವ ಗಾಳಿಪಟಗಳನ್ನು ರಚಿಸಿ ಪ್ರದರ್ಶಿಸಿದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ವಿಕ್ಟರ್ ವಾಜ್ ಇ. ವಂದಿಸಿದರು. ಯೂತ್ ರೆಡ್ ಕ್ರಾಸ್ ಘಟಕದ ಯೋಜನಾಧಿಕಾರಿ ಸಿಲ್ವಿಯ ಪಾಯ್ಸ್ ಕಾರ್ಯಕ್ರಮ ನಿರೂಪಿಸಿದರು.

Kinnigoli-16031902

Comments

comments

Comments are closed.

Read previous post:
Kinnigoli-16031901
ಕೈಗಾರಿಕಾ ತರಬೇತಿ ಸಂಸ್ಥೆ ತಪೋವನ

ಕಿನ್ನಿಗೋಳಿ : ಯುವಕರು ವಿವೇಕಾನಂದರ ಆದರ್ಶವನ್ನು ಮೈಗೂಡಿಸಿ ತಮ್ಮ ಜೀವನದಲ್ಲಿ ಆಳವಡಿಸಿಕೊಂಡು ಬಲಿಷ್ಠ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಪಾಲುದಾರರಾಗಬೇಕು ಎಂದು ಮಂಗಳೂರು ರಾಮಕೃಷ್ಣ ಮಿಷನ್‌ನ ಅಕ್ಷತಾ ಬಜಪೆ ಹೇಳಿದರು....

Close