ಕೈಗಾರಿಕಾ ತರಬೇತಿ ಸಂಸ್ಥೆ ತಪೋವನ

ಕಿನ್ನಿಗೋಳಿ : ಯುವಕರು ವಿವೇಕಾನಂದರ ಆದರ್ಶವನ್ನು ಮೈಗೂಡಿಸಿ ತಮ್ಮ ಜೀವನದಲ್ಲಿ ಆಳವಡಿಸಿಕೊಂಡು ಬಲಿಷ್ಠ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಪಾಲುದಾರರಾಗಬೇಕು ಎಂದು ಮಂಗಳೂರು ರಾಮಕೃಷ್ಣ ಮಿಷನ್‌ನ ಅಕ್ಷತಾ ಬಜಪೆ ಹೇಳಿದರು.
ನಿಟ್ಟೆ ವಿದ್ಯಾ ಸಂಸ್ಥೆಯ ಅಂಗ ಸಂಸ್ಥೆಯಾದ ಮುಲ್ಕಿ ರಾಮಕೃಷ್ಟ ಪೂಂಜಾ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎನ್.ಎಸ್.ಎಸ್. ಘಟಕ ಹಾಗೂ ಎನ್.ಇ.ಟಿ. ರೋವರ್ಸ್ ಘಟಕ ಮತ್ತು ರಾಮಕೃಷ್ಣ ಮಿಷನ್ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರು 1893ನೇ ಇಸವಿಯಲ್ಲಿ ಅಮೇರಿಕದ ಚಿಕಾಗೊದಲ್ಲಿ ನಡೆದ ಧಾರ್ಮಿಕ ಸಮ್ಮೆಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾರತದ ಸಂಸ್ಕ್ರೃತಿಯ ಕುರಿತು ಐತಿಹಾಸಿಕ ಭಾಷಣದ 125 ವರ್ಷಾಚರಣೆಯ ಅಂಗವಾಗಿ ತೋಕೂರು ಐ.ಟಿ.ಐ. ಸಂಸ್ಥೆಯಲ್ಲಿ ಮಾತನಾಡಿದರು.
ಸಂಸ್ಥೆಯ ತರಬೇತಿ ಅಧಿಕಾರಿ ಲಕ್ಷ್ಮೀಕಾಂತ್ ಪ್ರಸ್ತಾವನೆಗೈದು

ಕಾರ್ಯಕ್ರಮದ ಮಹತ್ವ ತಿಳಿಸಿದರು.
ಸಂಸ್ಥೆಯ ಪ್ರಿನ್ಸಿಪಾಲ್ ವೈ. ಎನ್. ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಉದ್ಯೋಗಾಧಿಕಾರಿ ರಘುರಾಮ್ ರಾವ್, ಕಛೇರಿ ಅಧೀಕ್ಷಕ ಹರೀಶ್ವಂದ್ರ ಹಾಗೂ ರೋವರ್ ಲೀಡರ್ ಸುರೇಶ್ ಎಸ್. ಉಪಸ್ಥಿತರಿದ್ದರು.

Kinnigoli-16031901

Comments

comments

Comments are closed.