ಕಿನ್ನಿಗೋಳಿ ಆರೋಗ್ಯ ತಪಾಶಿಣಾ ಶಿಬಿರ

ಕಿನ್ನಿಗೋಳಿ : ಇಂದಿನ ಒತ್ತಡದ ಜೀವನದಲ್ಲಿ ಅದರಲ್ಲೂ ಮಹಿಳೆಯರಲ್ಲಿ ಆರೋಗ್ಯ ಸಮಸ್ಯೆ ಕಾಡುತ್ತಿದ್ದು ಕಾಲ ಕಾಲಕ್ಕೆ ವೈದ್ಯರಿಂದ ತಪಾಸಣೆ ನಡೆಸಬೇಕು ಎಂದು ಕಿನ್ನಿಗೋಳಿ ಚರ್ಚ್ ಧರ್ಮಗುರು ರೆ.ಫಾ. ಮ್ಯಾಥ್ಯೂ ವಾಸ್ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಲಯನ್ಸ್ ಕ್ಲಬ್ ಹಾಗೂ ಲಯನೆಸ್ ಕ್ಲಬ್ ಹಾಗೂ ವಿವಿಧ ಸಂಘಟನೆಗಳ ಸಹಕಾರದಲ್ಲಿ ವಿಶೇಷವಾಗಿ ಮಹಿಳೆಯರಿಗಾಗಿ ಆಯೋಜಿಸಿದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಫಾದರ್ ಮುಲ್ಲರ‍್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಹಿರಿಯ ವೈದ್ಯ ಡಾ. ಪ್ರಶಾಂತ್ ವೈ. ಎನ್ ಮಹಿಳೆಯರ ಆರೋಗ್ಯ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಕಿನ್ನಿಗೊಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಡೊನಿ ಮಿನೇಜಸ್, ಕಿನ್ನಿಗೋಳಿ ಲಯನೆಸ್ ಕ್ಲಬ್‌ನ ಹಿಲ್ದಾ ಮಿನೇಜಸ್, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಶ್ವೇತಾ ಹೆಗ್ಡೆ, ಭ್ರಾಮರೀ ಮಹಿಳಾ ಸಮಾಜ ಅಧ್ಯಕ್ಷೆ ರೇವತಿ ಪುರುಷೋತ್ತಮ್, ಕಿನ್ನಿಗೋಳಿ ವನಿತಾ ಸಮಾಜ ಅಧ್ಯಕ್ಷೆ ರೋಹಿಣಿ ನವೀನ್, ಸುರಗಿರಿ ಮಹಿಳಾ ಮಂಡಲ ಅಧ್ಯಕ್ಷೆ ಪ್ರಮೀಳಾ ವಿನಯ್, ಉಜ್ವಲ್ ಸಂಘಟನೆಯ ಅನಿತಾ ಡಿಸೋಜ, ಕಿರೆಂ ಜ್ಯೋತಿ ಸ್ತ್ರಿ ಸಂಘಟನೆಯ ಲವೀನಾ ಪಿರೇರಾ, ವರೋನಿಕ ಸ್ತ್ರಿ ಸಂಘಟನೆ ಬಳ್ಕುಂಜೆ ಉಪಾಧ್ಯಕ್ಷೆ ಶಾಂತಿ ರೊಡ್ರಿಗಸ್, ಏಳಿಂಜೆ ಶ್ರೀ ದೇವಿ ಮಹಿಳಾ ಮಂಡಳಿಯ ಕೌಶಲ್ಯ ಶೆಟ್ಟಿ, ಕಟೀಲು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಪುಷ್ಪಾ ಜೆ. ಶೆಟ್ಟಿ , ಪದ್ಮನೂರು ಜ್ಯೋತಿ ಮಹಿಳಾ ಮಂಡಳಿಯ ಮೆಲಿಷಾ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
ಕಿನ್ನಿಗೋಳಿ ಲಯನ್ಸ್ ಅಧ್ಯಕ್ಷೆ ರೇಷ್ಮಾ ಮಿನೇಜಸ್ ಸ್ವಾಗತಿಸಿದರು. ಸ್ಮಿತಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Kinnigoli-17031902

Comments

comments

Comments are closed.

Read previous post:
Kinnigoli-16031905
ಭಜನಾ ನಡಿಗೆ ಭ್ರಾಮರಿಯಡೆಗೆ

ಕಿನ್ನಿಗೋಳಿ : ಕಿನ್ನಿಗೋಳಿ ಶ್ರೀ ರಾಮ ಮಂದಿರ ದಿಂದ ಶ್ರೀ ಕ್ಷೇತ್ರ ಕಟೀಲಿಗೆ ಭಜನಾ ನಡಿಗೆ ಭ್ರಾಮರಿಯಡೆಗೆ ಕಾರ್ಯಕ್ರಮ ಭಾನುವಾರ ಸಂಜೆ 4 ಗಂಟೆಗೆ ಕಿನ್ನಿಗೋಳಿ ಶ್ರೀ ರಾಮ...

Close