ಸ್ಮರಣಾರ್ಥ 2019- ಕ್ರಿಕೆಟ್ ಪಂದ್ಯಾಟ

ಕಿನ್ನಿಗೋಳಿ : ಸಂಘ ಸಂಸ್ಥೆಗಳು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಕ್ರೀಡೆಯೊಂದಿಗೆ ಹಮ್ಮಿಕೊಳ್ಳಬೇಕು ಎಂದು ಮುಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ಮಹಮ್ಮದ್ ರಫೀಕ್ ಕಿನ್ನಿಗೋಳಿ ಹೇಳಿದರು.
ಭಾನುವಾರ ಕಿನ್ನಿಗೋಳಿ ರಾಜರತ್ನಪುರದಲ್ಲಿ ಕಾಫಿಕಾಡು ಫ್ರೆಂಡ್ಸ್ ಆಯೋಜಿಸಿದ ದಿ. ರಾಘವೇಂದ್ರ ಶೆಟ್ಟಿ ಸ್ಮರಣಾರ್ಥ 2019- ಕ್ರಿಕೆಟ್ ಪಂದ್ಯಾಟದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ವಸಂತಿ ಶೆಟ್ಟಿ, ಸೀತಾರಾಮ ಶೆಟ್ಟಿ, ವಿನ್ಸೆಂಟ್ ರೊಡ್ರಿಗಸ್, ಸತ್ಯ ಜೆ. ಶೆಟ್ಟಿ, ರವಿ ಶೆಟ್ಟಿ, ಶ್ರೀಕುಮಾರ್, ಗಣೇಶ್ ಕಾಮತ್, ಸಂದೀಪ್, ಸುದರ್ಶನ್ ಕರ್ನಿರೆ ಮತ್ತಿತರರು ಉಪಸ್ಥಿತರಿದ್ದರು.
ರಫೀಕ್ ಕಾರ್ಯಕ್ರಮ ನಿರೂಪಿಸಿದರು.
ಈಗಲ್ ಕುಂಬಾಶಿ ಪ್ರಥಮ, ಕಿನ್ನಿಗೋಳಿ ಕಾಪಿಕಾಡು ರಾಘು ಫ್ರೆಂಡ್ಸ್ ದ್ವಿತೀಯ, ಕಿನ್ನಿಗೋಳಿ ಕಾಫಿಕಾಡು ಫ್ರೆಂಡ್ಸ್ ತೃತೀಯ ಪ್ರಶಿಸ್ತಿ ಪಡೆದುಕೊಂಡಿತು. ಈಗಲ್ ತಂಡದ ಪ್ರದೀಪ್ ಸರಣಿ ಶ್ರೇಷ್ಠ ಹಾಗೂ ನಾಗ ಉತ್ತಮ ದಾಂಡಿಗ ಪ್ರಶಸ್ತಿ ಪಡೆದುಕೊಂಡರು. ಕಾಫಿಕಾಡು ಫ್ರೆಂಡ್ಸ್ ಅಭಿಷೇಕ್ ಉತ್ತಮ ಎಸೆತಗಾರ ಪ್ರಶಸ್ತಿ ಪಡೆದುಕೊಂಡರು.

Kinnigoli-17031903

 

Comments

comments

Comments are closed.

Read previous post:
Kinnigoli-16031904
38ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವ

ಕಿನ್ನಿಗೋಳಿ: ತಾಳಿಪಾಡಿ ಶ್ರೀ ಮೂಕಾಂಬಿಕಾ ದೇವಳ ಶಾಂತಿನಗರ ಗುತ್ತಕಾಡು, 38 ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಶುಕ್ರವಾರ ನಡೆಯಿತು ಈ ಸಂದರ್ಭ ಸಾಮೂಹಿಕ ಆಶ್ಲೇಷ ಬಲಿ ಮತ್ತು ನಾಗತಂಬಿಲ...

Close