ಮಹಿಳಾ ಶಕ್ತಿಗೆ ಮುಕ್ತ ನೆರವು

ಕಿನ್ನಿಗೋಳಿ : ಮಹಿಳೆಯರಿಗೆ ಮುಕ್ತವಾದ ನೆರವು ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ಕರೆತರುವ ಮೂಲಕ ಸಮಾಜಮುಖಿ ಚಿಂತನೆಗೆ ಸಂಘ ಸಂಸ್ಥೆಗಳು ಪ್ರಯತ್ನ ನಡೆಸಬೇಕು ಎಂದು ತೋಕೂರು ಶ್ರಿ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್‌ಕುಮಾರ್ ಬೇಕಲ್ ಹೇಳಿದರು.
ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಸಭಾಂಗಣದಲ್ಲಿ ಮಂಗಳೂರು ಪ್ರಜ್ಞಾ ಸಲಹಾ ಕೇಂದ್ರ, ಹೆಣ್ಣು ಮಕ್ಕಳ ಹಾಗೂ ಮಹಿಳಾ ಹಕ್ಕುಗಳ ಸಬಲೀಕರಣ ಮತ್ತು ಪ್ರವರ್ತನ ಯೋಜನೆ , ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಮತ್ತು ತೋಕೂರು ಮಹಿಳಾ ಮಂಡಲದ ಸಂಯುಕ್ತ ಆಶ್ರಯದಲ್ಲಿ
ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ತೋಕೂರು ಮಹಿಳಾ ಮಂಡಲ ಅಧ್ಯಕ್ಷೆ ವಿಫುಲಾ ಡಿ. ಶೆಟ್ಟಿಗಾರ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸಮಾಜದ ಎಲ್ಲಾ ಸೇವಾ ಸಂಸ್ಥೆಗಳು ಮಹಿಳೆಯರ ಜಾಗೃತಿ ಕಾರ್ಯಕ್ರಮದ ಮೂಲಕ ಆತ್ಮಸ್ಥೈರ್ಯವನ್ನು ಹೆಚ್ಚಿಸಬೇಕು ಎಂದರು.
ಪ್ರಜ್ಞಾ ಸಲಹಾ ಕೇಂದ್ರದ ಯೋಜನಾಧಿಕಾರಿ ವಿಲಿಯಂ ಸ್ಯಾಮುವೆಲ್ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಗೌರವಾಧ್ಯಕ್ಷ ಯೋಗೀಶ್ ಕೋಟ್ಯಾನ್, ಪ್ರಜ್ಞಾ ಸಲಹಾ ಕೇಂದ್ರದ ಪ್ರದೀಪ್, ಅಶೋಕ್, ನಿರ್ಮಲಾ, ಕಾವ್ಯಾ ಉಪಸ್ಥಿತರಿದ್ದರು.
ಪ್ರಜ್ಞಾ ಸಲಹಾ ಕೇಂದ್ರದ ಜೋಯಿಲಿನ್ ಸ್ವಾಗತಿಸಿದರು, ರೇಶ್ಮ ಜೋಗಿ ಬಹುಮಾನಿತರ ಪಟ್ಟಿ ವಾಚಿಸಿದರು, ಮೇವಿಸ್ ಡಿಸೋಜ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಮಹಿಳೆಯರಿಗೆ ಭಾಷಣ, ಜಾಗೃತಿ ಹಾಡು ಮತ್ತು ಮನೋರಂಜನಾ ಕ್ರೀಡೆ ನಡೆಸಲಾಯಿತು.

Kinnigoli-17031905

Comments

comments

Comments are closed.

Read previous post:
ಕರ್ನಾಟಕ ಬ್ಯಾಂಕ್ ಶಾಖೆ ಉದ್ಘಾಟನೆ

ಕಿನ್ನಿಗೋಳಿ : ಕರ್ನಾಟಕ ಬ್ಯಾಂಕಿನ 839ನೇ ಶಾಖೆ ನಡುಗೋಡು-ಕಟೀಲು ಅಜಾರಿನಲ್ಲಿ ಮಾರ್ಚ್ 20 ಬುಧವಾರ ಬೆಳಿಗ್ಗೆ ಉದ್ಘಾಟನೆಗೊಳ್ಳಲಿದೆ. ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಮಹಾಬಲೇಶ್ವರ ಎಂ.ಎಸ್. ಶಾಖೆ ಉದ್ಘಾಟಿಸಲಿದ್ದು, ಕಟೀಲು...

Close