ಮೆನ್ನಬೆಟ್ಟು ಗ್ರಾ.ಪಂ.ಗೆ ಘೇರಾವು

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಬಳಿಯ ಮುಗ್ರೋಡಿ ವಸತಿ ಸಮುಚ್ಚಯಕ್ಕೆ ನೀರಿನ ಸಂಪರ್ಕವನ್ನು ನೀಡುವುದನ್ನು ವಿರೋಧಿಸಿ ಸಮೀಪದ ನವೋದಯ ನಗರದ ಗ್ರಾಮಸ್ಥರು ಪೈಪ್ ಲೈನ್ ಕಾಮಾಗಾರಿ ತಡೆಹಿಡಿದ ಘಟನೆ ಮಂಗಳವಾರ ನಡೆದಿದೆ.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿಗೆ ಘೇರಾವು ಹಾಕಿದ ಗ್ರಾಮಸ್ಥರು ನವೋದಯ ನಗರಕ್ಕೆ ಸಮರ್ಪಕ ಕುಡಿಯುವ ನೀರು ಕಲ್ಪಿಸಿಲ್ಲ. ವಾರಕ್ಕೆ ಒಂದೆರಡು ಬಾರಿ ಮಾತ್ರ ನೀರು ಬರುತ್ತಿದ್ದು ಜನರಿಗೆ ತುಂಬಾ ಸಮಸ್ಯೆ ಆಗುತ್ತಿದ್ದು ಅದರ ನಡುವೆಯೇ ವಸತಿ ಸಮುಚ್ಚಯಕ್ಕೆ ನೀರು ಸರಬರಾಜು ಮಾಡುವುದರಿಂದ ಇನ್ನಷ್ಟು ನೀರಿನ ಸಮಸ್ಯೆ ಉಲ್ಬಣಗೊಳ್ಳಲಿದೆ ಎಂದು ಆರೋಪಿಸಿದ್ದಾರೆ.
ಮೆನ್ನಬೆಟ್ಟು ಪಂಚಾಯಿತಿ ಉಪಾಧ್ಯಕ್ಷ ಮೋರ್ಗನ್ ವಿಲಿಯಂ ಸಾಲಿನ್ಸ್ ಗ್ರಾಮಸ್ಥರನ್ನು ಸಮಾಧಾನಪಡಿಸಿ ಮೆನ್ನಬೆಟ್ಟು ಗ್ರಾಮ ವ್ಯಾಪ್ತಿಯಲ್ಲಿ ಎರಡು ನೀರಿನ ಹೆಡ್ ಟ್ಯಾಂಕ್‌ಗಳಿಗೆ ಬಹುಗ್ರಾಮ ಕುಡಿಯುವ ನೀರು ಪೈಪ್ ಲೈನ್‌ನ ತಾಂತ್ರಿಕ ಸಮಸ್ಯೆ ತಲೆದೋರಿದ್ದು ಹಾಗೂ ವಿದ್ಯುತ್ ಆಡಚಣೆಯಿಂದ ಹಾಗೂ ನೀರಿನ ಬೇಡಿಕೆಯನ್ನು ಗ್ರಾಮಕ್ಕೆ ಸರಿತೂಗಿಸಬೇಕಾದ್ದರಿಂದ ಹೆಚ್ಚಿನ ನೀರಿನ ಸಮಸ್ಯೆ ಆಗುತ್ತಿದ್ದು ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಕಮಡುಕೊಳ್ಳಲಾಗುವುದು. ಸದ್ಯ ವಸತಿ ಸಮುಚ್ಚಯಕ್ಕೆ ನೀರಿನ ಸಂಪರ್ಕ ನಿಲ್ಲಿಸಲಾಗುವುದು ಎಂದರು.
ಈ ಸಂದರ್ಭ ನವೋದಯ ನಗರದ ಸಾರ್ವಜನಿಕರು ಪಂಚಾಯಿತಿಗೆ ನೀರಿನ ಸಮಸ್ಯೆ ಬಗ್ಗೆ ಮನವಿ ಸಲ್ಲಿಸಿದರು.

ನವೋದಯ ನಗರದಲ್ಲಿ ಸುಮಾರು 80 ಮನೆಗಳಿದ್ದು ಸಮರ್ಪಕ ನೀರು ಬರುತ್ತಿಲ್ಲ. ವಾರಕ್ಕೆ ಒಂದೇ ಬಾರಿ ನೀರು ಬರುತ್ತಿದೆ. ಪಂಚಾಯಿತಿಗೆ ಮಾಹಿತಿ ನೀಡಿದ್ದೇವೆ ಇಲ್ಲಿನ ಸಮಸ್ಯೆ ಬಗೆಹರಿಸದೆ ಬೇರೊಂದು ಕಡೆ ನೀರಿನ ಸಂಪರ್ಕ ನೀಡಲು ನಾವು ಬಿಡುವುದಿಲ್ಲ. ಲೋಕೋಪಯೋಗಿ ಇಲಾಖೆಯ ಪರವಾನಿಗೆ ಇಲ್ಲದೆಯೇ ರಸ್ತೆ ಬದಿ ಅಗೆದು ಪೈಪ್ ಲೈನ್ ಅಳವಡಿಸಿದ್ದಾರೆ. ಕೆಲವೇ ಮನೆಗಳಿರುವ ವಸತಿ ಸಮುಚ್ಚಯಕ್ಕೆ ಎರಡುವರೆ ಇಂಚು ಪೈಪ್ ಅಳವಡಿಸಿದ್ದು ಇದು ಯಾವ ನ್ಯಾಯ ಇದರಿಂದ ನಮಗೆ ಇನ್ನಷ್ಟು ನೀರಿನ ಸಮಸ್ಯೆ ಹೆಚ್ಚಾಗಲಿದೆ.
ಗ್ರಾಮಸ್ಥರು
ನವೋದಯ ನಗರ ಮೆನ್ನಬೆಟ್ಟು.

ಮುಗ್ರೋಡಿ ವಸತಿ ಸಮುಚ್ಚಯಕ್ಕೆ ನೀರಿನ ಸಂಪರ್ಕಕ್ಕೆ ಮನವಿ ಬಂದಿದ್ದು, ಸಂಪರ್ಕ ನೀಡಲು ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ. ಇಂದು ಪೈಪ್ ಲೈನ್ ಕಾಮಗಾರಿ ನಡೆಯತ್ತಿರುವುದು ನಮ್ಮ ಗಮನಕ್ಕೆ ಬಂದಿರಲಿಲ್ಲ. ಗಮನಕ್ಕೆ ಬಂದ ನಂತರ ಕಾಮಗಾರಿಯನ್ನು ನಿಲ್ಲಿಸಲಾಗಿದೆ. ಮೆನ್ನಬೆಟ್ಟು ಪಂಚಾಯಿತಿ ವ್ಯಾಪ್ತಿಯ ಉಲ್ಲಂಜೆ ಮತ್ತು ಮಾರಿಗುಡಿ ಸಮೀಪದ ಟ್ಯಾಂಕ್ ಗೆ ಬಹುಗ್ರಾಮ ಕುಡಿಯುವ ನೀರು ಪೈಪ್ ಲೈನ್ ತಾಂತ್ರಿಕ ದೋಷದಿಂದ ಸಮರ್ಪಕ ನೀರು ಬರುತ್ತಿಲ್ಲ. ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಒಳಪಡುವ ಹಲವು ಗ್ರಾಮಗಳಿಗೆ ಬೇಸಿಗೆ ಕಾಲದಲ್ಲಿ ಎರಡು ದಿನಕ್ಕೊಂದು ಬಾರಿ ನೀರು ಸರಬರಾಜಾಗುತ್ತಿದೆ. ಪ್ರತೀ ದಿನ ನೀರು ಬಂದರೆ ನೀರಿನ ಸಮಸ್ಯೆ ಬಗೆಹರಿಯಬಹುದು.
ರಮ್ಯ ಕೆ.
ಪಂಚಾಯತ್ ಅಭಿವೃದ್ದಿ ಅಧಿಕಾರಿ ಮೆನ್ನಬೆಟ್ಟು

Kinnigoli-19031901

Comments

comments

Comments are closed.

Read previous post:
Kinnigoli-17031905
ಮಹಿಳಾ ಶಕ್ತಿಗೆ ಮುಕ್ತ ನೆರವು

ಕಿನ್ನಿಗೋಳಿ : ಮಹಿಳೆಯರಿಗೆ ಮುಕ್ತವಾದ ನೆರವು ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ಕರೆತರುವ ಮೂಲಕ ಸಮಾಜಮುಖಿ ಚಿಂತನೆಗೆ ಸಂಘ ಸಂಸ್ಥೆಗಳು ಪ್ರಯತ್ನ ನಡೆಸಬೇಕು ಎಂದು ತೋಕೂರು ಶ್ರಿ ಸುಬ್ರಹ್ಮಣ್ಯ...

Close