ಗಿಡಿಗೆರೆರಾಮಕ್ಕ- ವಿದ್ಯಾರ್ಥಿಗಳ ಸಂವಾದ

ಕಿನ್ನಿಗೋಳಿ : ಐಕಳ ಪೊಂಪೈ ಕಾಲೇಜು ಮಾನವಿಕ ಸಂಘದ ಅಂತಿಮ ಬಿ.ಎ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ, ತುಳು ಪಾಡ್ದನ ಕೋಗಿಲೆ ಕಟೀಲು ಸಮೀಪದ ಗಿಡಿಗೆರೆ ರಾಮಕ್ಕ ಅವರ ಮನೆಗೆ ಭೇಟಿ ನೀಡಿ ತುಳು ಪಾಡ್ದನ ಕುರಿತಾಗಿ ಸಂವಾದ ನಡೆಸಿದರು.
ತುಳು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪಾಡ್ದನದ ಮೂಲಕ ವಿಶೇಷ ಕೊಡುಗೆಯನ್ನು ನೀಡಿರುವ ರಾಮಕ್ಕ ತಮ್ಮ ಜೀವನದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡು ಪಾಡ್ದನದ ಕೆಲವು ಸಾಲುಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.
ಈ ಸಂದರ್ಭ ಪೊಂಪೈ ಕಾಲೇಜು ವತಿಯಿಂದ ಗಿಡಿಗೆರೆ ರಾಮಕ್ಕ ಅವರನ್ನು ಪೊಂಪ್ಯ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಜಗದೀಶ ಹೊಳ್ಳ ಸನ್ಮಾನಿಸಿದರು.
ಪೊಂಪೈ ಕಾಲೇಜು ಮಾನವಿಕ ಸಂಘದ ಮುಖ್ಯಸ್ಥ ಡಾ. ಪುರುಷೋತ್ತಮ ಕೆ.ವಿ., ಸಮಾಜ ಶಾಸ್ತ್ರ ಪ್ರಾಧ್ಯಾಪಕ ಪ್ರೊ. ಯೋಗೀಂದ್ರ ಬಿ., ಇತಿಹಾಸ ಸಹಾಯಕ ಪ್ರಾಧ್ಯಾಪಕ ಪ್ರೊ.ವಿಶ್ವಿತ್ ಶೆಟ್ಟಿ, ವಿದ್ಯಾರ್ಥಿ ನಾಯಕರಾದ ಜ್ಯೋತಿ ಡಿಸೋಜ, ಆಕಾಶ್ ಮತ್ತಿರರು ಉಪಸ್ಥಿತರಿದ್ದರು.

Kinnigoli-25031906

Comments

comments

Comments are closed.

Read previous post:
Kinnigoli-25031905
ಕಿನ್ನಿಗೋಳಿ :ಬಿಜೆಪಿ ಜನಪ್ರತಿನಿಧಿಗಳ ಸಭೆ

ಕಿನ್ನಿಗೋಳಿ : ಮೋದಿ ಸರಕಾರದ ಸಾಧನೆ ಜನಪರ ಸೇವಾ ಕಾರ್ಯ, ಅಭಿವೃದ್ಧಿ ಹಾಗೂ ಪ್ರಗತಿಪರ ಯೋಜನೆಗಳ ಬಗ್ಗೆ ಸಾಮಾನ್ಯ ಜನರಿಗೆ ತಿಳಿ ಹೇಳುವ ಕಾರ್ಯ ಕಾರ್ಯಕರ್ತರಿಂದ ಆಗಬೇಕಾಗಿದೆ ಎಂದು...

Close