ಅತ್ತೂರು ಕೊಡೆತ್ತೂರು ಮಾಗಣೆ ಸಮಿತಿ ರಚನೆ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಅತ್ತೂರು ಕೊಡೆತ್ತೂರು ಮಾಗಣೆಗೆ ಸಂಬಂಧಪಟ್ಟಿದ್ದು, ಮುಂದಿನ ವರ್ಷ 2020 ಜನವರಿ ತಿಂಗಳಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಸಂಪ್ರದಾಯದಂತೆ ಮಾಗಣೆ ಗ್ರಾಮಸ್ಥರ ಯಾವುದೇ ಸಭೆ ನಡೆಸದೆ ಕಡೆಗಣಿಸಿ ಬ್ರಹ್ಮಕಲಶೋತ್ಸವ ಕೌಂಟರ್ ತೆರೆಯಲಾಗಿದೆ. ದೇವಳದ ಜಾತ್ರೆ, ನವರಾತ್ರಿ ಉತ್ಸವ, ರಾಶಿ ಪೂಜೆ, ಸೀಯಾಳಭಿಷೇಕ ಮತ್ತಿತರ ಪ್ರಮುಖ ಪರ್ವ ಕಾಲದಲ್ಲಿ ಅತ್ತೂರು ಕೊಡೆತ್ತೂರು ಮಾಗಣೆಯ ಭಕ್ತರು ಹಾಗೂ ಅಲ್ಲಿನ ಗ್ರಾಮದ ಮುಖ್ಯ ಮನೆತನಗಳು ಭಾಗವಹಿಸುವುದು ಹಿಂದಿನ ನಡೆದು ಬಂದ ಪರಂಪರಾ ಕ್ರಮವಾಗಿದೆ. ಆದರೇ ಇತ್ತಿಚಿನ ದಿನಗಳಲ್ಲಿ ದೇವಳದ ಆಡಳಿತ ಮಂಡಳಿ ಗ್ರಾಮಸ್ಥರನ್ನು ಕಡೆಗಣಿಸುವ ಗುಮಾನಿಯಿದ್ದು ಈ ಬಗ್ಗೆ ಮಾಗಣೆಯ ಗ್ರಾಮಸ್ಥರು ಒಟ್ಟು ಸೇರಿ ಗ್ರಾಮಗಳ ಸಮಿತಿಯನ್ನು ರಚನೆ ಮಾಡಲಾಯಿತು. ದೇವಳ ಮತ್ತು ಗ್ರಾಮಸ್ಥರ ಬಗ್ಗೆ ಇದ್ದ ಗೊಂದಲ ಹಾಗೂ ಸಮಸ್ಯೆಯನ್ನು ಸರಿಪಡಿಸಲು ಮಾಗಣೆಯ ಭಕ್ತರು ಎಪ್ರಿಲ್ 7 ಭಾನುವಾರ ಸಂಜೆ 4 ಗಂಟೆಗೆ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಸಭೆ ನಡೆಸುವ ಬಗ್ಗೆ ನಿರ್ಣಯಿಸಲಾಯಿತು.
ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ, ಕೆ. ಭುವನಾಭಿರಾಮ ಉಡುಪ. ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ಚರಣ್ ಜೆ. ಶೆಟ್ಟಿ ಕೊಜಪಾಡಿ ಬಾಳಿಕೆ, ಶ್ರೀಧರ ಶೆಟ್ಟಿ , ಸಂಜೀವ ಮಡಿವಾಳ, ಅನಂತರಾಜ ಭಟ್, ರಾಘವ ಚೌಟ, ಸತೀಶ್ ಕಟೀಲು ಮತ್ತಿತತರು ತಮ್ಮ ಅಭಿಪ್ರಾಯ ತಿಳಿಸಿದರು.
ಕೆ. ವಿ. ಶೆಟ್ಟಿ ಪ್ರಸ್ತಾವನೆಗೈದು ಪ್ರಸನ್ನ ಶೆಟ್ಟಿ ಅತ್ತೂರು ಕಾರ್ಯಕ್ರಮ ನಿರೂಪಿಸಿದರು.

Kinnigoli-250319010

Comments

comments

Comments are closed.