ಕಿನ್ನಿಗೋಳಿ :ಬಿಜೆಪಿ ಜನಪ್ರತಿನಿಧಿಗಳ ಸಭೆ

ಕಿನ್ನಿಗೋಳಿ : ಮೋದಿ ಸರಕಾರದ ಸಾಧನೆ ಜನಪರ ಸೇವಾ ಕಾರ್ಯ, ಅಭಿವೃದ್ಧಿ ಹಾಗೂ ಪ್ರಗತಿಪರ ಯೋಜನೆಗಳ ಬಗ್ಗೆ ಸಾಮಾನ್ಯ ಜನರಿಗೆ ತಿಳಿ ಹೇಳುವ ಕಾರ್ಯ ಕಾರ್ಯಕರ್ತರಿಂದ ಆಗಬೇಕಾಗಿದೆ ಎಂದು ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಲೋಕಸಭಾ ಚುನಾವಣೆಯ ನಿಮಿತ್ತ ಬಿಜೆಪಿ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.
ಮೂಲ್ಕಿ ಮೂಡಬಿದ್ರೆ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸುಖೇಶ್ ಶೆಟ್ಟಿ ಶಿರ್ತಾಡಿ ಚುನಾವಣೆಯ ರೂಪು ರೇಷೆಗಳ ಬಗ್ಗೆ ಮಾಹಿತಿ ನೀಡಿದರು.
ಮೂಲ್ಕಿ ಮೂಡಬಿದ್ರೆ ಬಿಜೆಪಿ ಮಂಡಲ ಅಧ್ಯಕ್ಷ ಈಶ್ವರ್ ಕಟೀಲು, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಕಿನ್ನಿಗೋಳಿ ಶಕ್ತಿಕೇಂದ್ರದ ಅಧ್ಯಕ್ಷ ಸಂತೋಷ್ ಶೆಟ್ಟಿ, ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸುನಿಲ್ ಆಳ್ವ, ಸತ್ಯೇಂದ್ರ ಶೆಣೈ ಮೂಲ್ಕಿ, ಜಯಾನಂದ ಮೂಲ್ಕಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-25031905

Comments

comments

Comments are closed.

Read previous post:
Kateel-20031902
ಕಟೀಲು ಕರ್ಣಾಟಕ ಬ್ಯಾಂಕ್ ಉದ್ಘಾಟನೆ

ಕಿನ್ನಿಗೋಳಿ : ಮನ ಮನಗಳಲ್ಲಿ ಮನೆ ಮನೆಗಳಲ್ಲಿ ಬ್ಯಾಂಕ್‌ನ ಮಹತ್ವ ತಿಳಿಸಬೇಕು. ಗ್ರಾಹಕರ ಉಳಿತಾಯ ಹಾಗೂ ಗಳಿಕೆಯ ಪ್ರವೃತ್ತಿ ಹೆಚ್ಚಾದಾಗ ದೇಶ ಆರ್ಥಿಕ ಪ್ರಗತಿ ಹೊಂದುತ್ತದೆ. ಎಂದು ಕರ್ಣಾಟಕ...

Close