ಜಗನಾಥ ಶೆಟ್ಟಿ ಕುದ್ಕತೋಟ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಕಿಲೆಂಜೂರು ಕುದ್ಕತೋಟ ಜಗನಾಥ ಶೆಟ್ಟಿ ( 55) ಅಸೌಖ್ಯದಿಂದ ಭಾನುವಾರ ನಿಧನ ಹೊಂದಿದ್ದಾರೆ. ಮೃತರಿಗೆ ಇಬ್ಬರು ಸಹೋದರ ಮತ್ತು ಸಹೋದರಿ ಇದ್ದಾರೆ. ಶಾಲಾ ದಿನಗಳಲ್ಲಿ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಯನ್ನು ಪಡೆದಿದ್ದರು. ಇವರ ಸಾಧನೆಗೆ ನಾಲ್ಕು ವರ್ಷದ ಹಿಂದೆ ಕಟೀಲು ಪ್ರೌಢಶಾಲಾ 75 ನೇ ವರ್ಷ ಸಂಭ್ರಮಾಚರಣೆಯಲ್ಲಿ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಗಿತ್ತು. ಬಾಲ್ಯದಲ್ಲೇ ನಡೆದ ಅವಘಡವೊಂದರಲ್ಲಿ ಸೊಂಟದ ಬಲ ಕಳೆದುಕೊಂಡರೂ ಅನೇಕ ಕುಸುರಿ ಕೆಲಸದಲ್ಲಿ ತೊಡಗಿಕೊಂಡಿದ್ದು ಸಾರ್ವಜನಿಕರ ಗಮನ ಸೆಳೆದಿದ್ದರು.

Kinnigoli-25031907

Comments

comments

Comments are closed.