ಎಸ್. ಕೋಡಿ ಸಂಗಮ ಮಂಡಲ ವಾರ್ಷಿಕೋತ್ಸವ

ಕಿನ್ನಿಗೋಳಿ : ಮಹಿಳೆಯರು ಈಗ ಸಬಲೆಯಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಜನಪರ ಕೆಲಸಗಳು ಹಾಗೂ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮುನ್ನಡೆಯುತಿದ್ದು ಇತರರಿಗೆ ಮಾದರಿಯಾಗಿದೆ ಎಂದು ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಹೇಳಿದರು.
ಎಸ್. ಕೋಡಿ ಸಂಗಮ ಮಹಿಳಾ ಹಾಗೂ ಯುವತಿ ಮಂಡಲದ 16 ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಂಜೀವಿನಿ ಸಂಸ್ಥೆ ಸಂಯೋಜಕಿ ಯ ಭಗಿನಿ ಅಮಿತಾ ಮಾತನಾಡಿ ನಾವು ಸಂಘಟಿತ ರಚನಾತ್ಮಕ ಕೆಲಸ ಕಾರ್ಯ ಹಮ್ಮಿಕೊಂಡು ಸಮಾಜಕ್ಕೆ ಕೈಲಾದ ಸಹಾಯ ಮಾಡಬೇಕು. ಎಂದು ಹೇಳಿದರು.
ಈ ಸಂದರ್ಭ ವಿಕಲ ಚೇತನರಾದ ಶಾಂತಿ ತೋಕೂರು, ಬೇಬಿ ಹಂಸಿಕಾ ಅವರನ್ನು ಸನ್ಮಾನಿಸಿ ಧನ ಸಹಾಯ ನೀಡಲಾಯಿತು.
ನಡುಗೋಡು ಶಾಲಾ ಮುಖ್ಯ ಶಿಕ್ಷಕಿ ಲಕ್ಷ್ಮೀ ಶೆಟ್ಟಿ, ಭಗಿನಿ ಸಿಸ್ಟರ್ ಎಸ್ತಲಿಟಾ, ಪಡುಪಣಂಬೂರು ಗ್ರಾಮ ಪಂಚಾಯಿತಿ ಸದಸ್ಯೆ ಪುಪ್ಪಾವತಿ, ಬಬಿತಾ, ಪುಷ್ಪಾ, ಎಸ್. ಕೋಡಿ ಸಂಗಮ ಮಹಿಳಾ ಹಾಗೂ ಯುವತಿ ಮಂಡಲದ ಅಧ್ಯಕ್ಷೆ ಸುಶೀಲ, ಕಾರ್ಯದರ್ಶಿ ಸಾವಿತ್ರಿ, ಕೋಶಾಧಿಕಾರಿ ಮೋಹಿನಿ ಮತ್ತಿತತರಿದ್ದರು.
ಜಯಶ್ರೀ ಸ್ವಾಗತಿಸಿದರು. ಶಶಿ ಸುರೇಶ್ ವರದಿ ವಾಚಿಸಿದರು. ಆಶಾಲತಾ ಕಾರ್ಯಕ್ರಮ ನಿರೂಪಿಸಿದರು.

Kinnigoli-25031908

Comments

comments

Comments are closed.