ಏಳಿಂಜೆ ಕೃಷ್ಣ ಸಾಲ್ಯಾನ್

ಕಿನ್ನಿಗೋಳಿ : ಏಳಿಂಜೆ ಲಕ್ಷ್ಮೀಜನಾರ್ದನ ದೇವಸ್ಥಾನದ ಮೊಕ್ತೇಸರ, ಕಾಂಗ್ರೇಸ್ ಪಕ್ಷದ ಹಿರಿಯ ರಾಜಕಾರಣಿ , ಪ್ರಗತಿಪರ ಕೃಪಿಕ ಏಳಿಂಜೆ ಕೃಷ್ಣ ಸಾಲ್ಯನ್ ( 71) ಅವರು ಸೋಮವಾರದಂದು ನಿಧನ ಹೊಂದಿದರು. ಮೃತರು ಪತ್ನಿ , ಪುತ್ರಿಯನ್ನು ಅಗಲಿದ್ದಾರೆ.
ವೈ. ಕೃಷ್ಣ ಸಾಲ್ಯಾನ್ ಅವರು ಕಿನ್ನಿಗೋಳಿ ಮಂಗಳೂರು ತಾಲೂಕು ಪಂಚಾಯಿತಿ ಮೂರು ಬಾರಿ ಸದಸ್ಯರಾಗಿದ್ದು, ಸ್ಥಾಯಿ ಸಮಿತಿಯಲ್ಲಿ ಸದಸ್ಯರಾಗಿದ್ದರು. ಐಕಳ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ಆಗಿದ್ದರು. ನಾನಿಲ್ತಾರ್ ಕುಲಾಲ ಸಂಘ, ತೋಕೂರು ಕುಲಾಲ ಸಂಘದಲ್ಲಿ ಸಕ್ರಿಯರಾಗಿದ್ದರು. ಪ್ರಸ್ತುತ ಏಳಿಂಜೆ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾಗಿದ್ದರು. ಕಿನ್ನಿಗೋಳಿ ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷರು ಆಗಿದ್ದು ವಿವಿಧ ಹುದ್ದೆಗಳಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಕಳೆದ 60 ವರುಷದಿಂದ ಏಳಿಂಜೆಯಲ್ಲಿ ಅಂಗಡಿ ಹೊಂದಿದ್ದು ಕಿಟ್ಟಿ ಅಂಗಡಿ ಎಂದೇ ಪ್ರಸಿದ್ದ್ಧಿ ಪಡೆದಿದ್ದರು. ಅತ್ಯುತ್ತಮ ಕೃಷಿ ಸಾಧನೆಗೆ ಈ ಬಾರಿಯ ದ. ಕ. ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪಡೆದ್ದಿದ್ದರು.

Kinnigoli-26031901

Comments

comments

Comments are closed.

Read previous post:
Kinnigoli-25031904
ಹಳೆಯಂಗಡಿ : ಸ್ವೀಪ್ ಸಮಿತಿ ಪೂರ್ವಭಾವಿ ಸಭೆ

ಕಿನ್ನಿಗೋಳಿ : ಸಸಿಹಿತ್ಲುವಿನಿಂದ ತಲಪಾಡಿಯವರೆಗೆ ಮಾನವ ಸರಪಳಿ : ರಘು ಮತದಾರರ ಮತದಾನದ ಬಗ್ಗೆ ಜಿಲ್ಲಾ ಸ್ವೀಪ್ ಸಮಿತಿಯು ಹಲವಾರು ಕಾರ್ಯಕ್ರಮಗಳಿಂದ ಜಾಗೃತಿ ಮೂಡಿಸಿ ಲೋಕಸಭಾ ಚುನಾವಣೆಯಲ್ಲಿ ಗರಿಷ್ಠ...

Close