ಏಳಿಂಜೆ ಕೃಷ್ಣ ಸಾಲ್ಯಾನ್ ಶ್ರದ್ಧಾಂಜಲಿ ಸಭೆ

ಕಿನ್ನಿಗೋಳಿ : ಏಳಿಂಜೆ ಕೃಷ್ಣ ಸಾಲ್ಯಾನ್ ಜನಪರ ಕಾಳಜಿ ಹಾಗು ಸಮಾಜ ಮುಖಿ ಚಿಂತನೆಯ ಕೆಲಸ ಕಾರ್ಯಗಳನ್ನು ಮಾಡಿ ಹೆಸರುಗಳಿಸಿದ್ದರು. ಅವರ ಅಗಲುವಿಕೆ ಕಿನ್ನಿಗೋಳಿ ಏಳಿಂಜೆ ಪರಿಸರದಲ್ಲಿ ತುಂಬಲಾರದ ನಷ್ಟ ಎಂದು ಪೊಂಪೈ ಪದವಿ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಕೆ. ಜಗದೀಶ ಹೊಳ್ಳ ಹೇಳಿದರು.
ಮಂಗಳವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿ ಲಯನ್ಸ್ ಕ್ಲಬ್ , ಲಯನೆಸ್ ಕ್ಲಬ್, ರೋಟರಿ ಕ್ಲಬ್, ಯುಗಪುರುಷ ಸಹಭಾಗಿತ್ವದಲ್ಲಿ ನಿಧನರಾದ ಏಳಿಂಜೆ ಕೃಷ್ಣ ಸಾಲ್ಯಾನ್ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ನಿವೃತ್ತ ಉಪ ತಹಶೀಲ್ದಾರ ವೈ. ಯೋಗೀಶ್ ರಾವ್ ಮಾತನಾಡಿ ಕೃಷ್ಣ ಸಾಲ್ಯಾನ್ ಮತ್ತು ನಾನು 60 ವರ್ಷದಿಂದ ಬಾಲ್ಯದ ಗೆಳೆಯರು. ಅವರ ಕಾರ್ಯ ತತ್ಪರತೆ ಶ್ಲಾಘನೀಯ ಎಂದು ಹೇಳಿದರು.
ನಿವೃತ್ತ ಹಿಂದಿ ಉಪನ್ಯಾಸಕ ಜೆ. ಬಿ ಮಿರಾಂದ ಮಾತನಾಡಿ 35 ವರ್ಷದ ಹಿಂದೆ ಏಳಿಂಜೆಯಲ್ಲಿ ವಾಹನ ಇಲ್ಲದ ಕಾಲದಲ್ಲಿ ಕಾರು ಹಾಗೂ ದೂರವಾಣಿ ಹೊಂದಿಕೊಂಡು ಜನರ ಕಷ್ಟಕ್ಕೆ ಸದಾ ಸ್ಪಂದಿಸುವ ಮನೋಭಾವ ಹೊಂದಿದ ವೃಕ್ತಿ ಆಗಿದ್ದರು ಅವರ ಜಾಗವನ್ನು ತುಂಬಬಲ್ಲ ಇನ್ನೊಬ್ಬ ವ್ಯಕ್ತಿ ಸಿಗುವುದು ವಿರಳ ಎಂದು ಹೇಳಿದರು. ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ, ಯಕ್ಷಲಹರಿಯ ಅಧ್ಯಕ್ಷ ಪಿ. ಸತೀಶ್ ರಾವ್, ನಿವೃತ್ತ ಶಿಕ್ಷಕ ವಲೇರಿಯನ್ ಸಿಕ್ವೇರ, ಜೊಸ್ಸಿ ಪಿಂಟೋ, ಲಾರೆನ್ಸ್ ಫೆರ್ನಾಂಡಿಸ್, ಕೆ. ಬಿ. ಸುರೇಶ್, ಕರುಣಾಕರ ಶೆಟ್ಟಿ ಸುಧಾಕರ ಶೆಟ್ಟಿ, ಹಿಲ್ಡಾ ಡಿಸೋಜ, ಶಾಂಭವಿ ಶೆಟ್ಟಿ, ಸುರೇಶ್ ಶೆಟ್ಟಿ, ಪುರಂದರ ಶೆಟ್ಟಿ, ಶರತ್ ಶೆಟ್ಟಿ ಮತ್ತಿತರರು ಕೃಷ್ಣ ಸಾಲ್ಯಾನ್ ಬಗ್ಗೆ ಮಾತನಾಡಿದರು.
ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Comments are closed.

Read previous post:
Kinnigoli-27031901
ಕಿನ್ನಿಗೋಳಿ ರೋಟರಿ ವೃತ್ತಿ ಮಾಸಾಚರಣೆ

ಕಿನ್ನಿಗೋಳಿ : ರೋಟರಿಯಂತಹ ಅಂತರಾಷ್ಟ್ರೀಯ ಸೇವಾ ಸಂಸ್ಥೆಗಳು ಜನರ ಕಷ್ಟ ಸುಖಗಳಿಗೆ ಸ್ಪಂದಿಸಿ ಸಮಾಜದ ಅಭಿವೃದ್ದಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ರೋಟರಿ 3181 ರ ಜಿಲ್ಲಾ ವೃತ್ತಿಪರ ನಿರ್ದೇಶಕ ಡಾ....

Close