ಕಿನ್ನಿಗೋಳಿ ರೋಟರಿ ವೃತ್ತಿ ಮಾಸಾಚರಣೆ

ಕಿನ್ನಿಗೋಳಿ : ರೋಟರಿಯಂತಹ ಅಂತರಾಷ್ಟ್ರೀಯ ಸೇವಾ ಸಂಸ್ಥೆಗಳು ಜನರ ಕಷ್ಟ ಸುಖಗಳಿಗೆ ಸ್ಪಂದಿಸಿ ಸಮಾಜದ ಅಭಿವೃದ್ದಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ರೋಟರಿ 3181 ರ ಜಿಲ್ಲಾ ವೃತ್ತಿಪರ ನಿರ್ದೇಶಕ ಡಾ. ಅರವಿಂದ ಭಟ್ ಹೇಳಿದರು.
ಕಿನ್ನಿಗೋಳಿ ರೋಟರಿ ಸಭಾಭವನದಲ್ಲಿ ಸೋಮವಾರ ನಡೆದ ರೋಟರಿ ವೃತ್ತಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಹಿರಿಯ ಕುಶಲ ಕರ್ಮಿ ಶಿಲ್ಪಿ ಐಕಳ ಹರೀಶ್ಚಂದ್ರ ಆಚಾರ್ಯ, ನಿವೃತ್ತ ಹಿರಿಯ ಚಾಲಕ ದಯಾನಂದ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ರೋಟರಿ 3181ರ ವಲಯ 1ರ ಉಪಗವರ್ನರ್ ಮಹಮ್ಮದ್ ಅಸ್ಲಾಂ , ವಲಯ ಸೇನಾನಿ ಜೆರಾಲ್ದ್ ಮಿನೇಜಸ್, ಹೆರಿಕ್ ಪಾಯಸ್ ಸಂತೋಷ್ ಆಚಾರ್ಯ, ಸ್ವರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಕಿನ್ನಿಗೋಳಿ ರೋಟರಿ ಅಧ್ಯಕ್ಷ ಕೆ. ಬಿ. ಸುರೇಶ್ ಸ್ವಾಗತಿಸಿದರು. ಕಾರ್ಯದರ್ಶಿ ಸಾಯಿನಾಥ ಶೆಟ್ಟಿ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-27031901

Comments

comments

Comments are closed.

Read previous post:
Kinnigoli-26031901
ಏಳಿಂಜೆ ಕೃಷ್ಣ ಸಾಲ್ಯಾನ್

ಕಿನ್ನಿಗೋಳಿ : ಏಳಿಂಜೆ ಲಕ್ಷ್ಮೀಜನಾರ್ದನ ದೇವಸ್ಥಾನದ ಮೊಕ್ತೇಸರ, ಕಾಂಗ್ರೇಸ್ ಪಕ್ಷದ ಹಿರಿಯ ರಾಜಕಾರಣಿ , ಪ್ರಗತಿಪರ ಕೃಪಿಕ ಏಳಿಂಜೆ ಕೃಷ್ಣ ಸಾಲ್ಯನ್ ( 71) ಅವರು ಸೋಮವಾರದಂದು ನಿಧನ...

Close