ಅಗ್ನಿ ಅನಾಹುತ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ

ಕಿನ್ನಿಗೋಳಿ : ಐಕಳ ಪೊಂಪೈ ಕಾಲೇಜು ಯೂತ್ ರೆಡ್ ಕ್ರಾಸ್ ಘಟಕದ ನೇತೃತ್ವದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ಪಾಂಡೇಶ್ವರ ಅಗ್ನಿಶಾಮಕ ಮತ್ತು ತುರ್ತುಸೇವಾ ಠಾಣೆಯ ಸಿಬ್ಬಂದಿಗಳು ಅಗ್ನಿ ಅನಾಹುತದ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ಪೊಂಪೈ ಕಾಲೇಜು ಆವರಣದಲ್ಲಿ ಮಂಗಳವಾರ ನಡೆಸಿದರು.
ಅಗ್ನಿದುರಂತ ಸಂಭವಿಸುವ ಮತ್ತು ಅದನ್ನು ನಿಭಾಯಿಸುವ ಕುರಿತು ಪಾಂಡೇಶ್ವರ ಅಗ್ನಿಶಾಮಕ ಮತ್ತು ತುರ್ತುಸೇವಾ ಠಾಣೆಯ ಫೈರ್ ಆಫೀಸರ್ ಬಿ. ಶೇಖರ್ ಮಾಹಿತಿ ನೀಡಿದರು.
ಅಗ್ನಿ ದುರಂತಗಳನ್ನು ತಡೆಗಟ್ಟುವ ವಿದಿವಿಧಾನಗಳನ್ನು ವಿದ್ಯಾರ್ಥಿಗಳಿಗೆ ತಿಳಿಹೇಳಿ ಅಗ್ನಿ ಅನಾಹುತವನ್ನು ನಿಭಾಯಿಸುವ ಪ್ರಾತ್ಯಕ್ಷಿಕೆಯನ್ನು ಪಾಂಡೇಶ್ವರ ಅಗ್ನಿಶಾಮಕ ಮತ್ತು ತುರ್ತುಸೇವಾ ಠಾಣೆಯ ಆರ್ ಡಿ. ರಮೇಶ್, ಮಹೇಶ್, ಕಾರ್ತಿಕ್, ಸಂತೋಷ್, ಮಂಜುನಾಥ್ ಮಿರ್ಜಿ, ನಿಖಿಲ್, ಜೀವನ್ ರಾಜ್ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.
ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಕೆ. ಜಗದೀಶ ಹೊಳ್ಳ, ಯೂತ್ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಸಿಲ್ವಿಯ ಪಾಯ್ಸ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಇ. ವಿಕ್ಟರ್ ವಾಜ್, ಕುಮಾರಿ ಅನ್ವಿತ, ಪೊಂಪೈ ಕಾಲೇಜು ನ್ಯಾಕ್ ಸಂಯೋಜನಾಧಿಕಾರಿ ಪ್ರೊ. ಯೋಗಿಂದ್ರ ಬಿ., ಕಛೇರಿ ಮೇಲ್ವಿಚಾರಕ ರೋಕಿ ಜಿ. ಲೋಬೊ ಹಾಗು ದೈಹಿಕ ಶಿಕ್ಷಣ ನಿರ್ದೇಶಕ ಜೇಮ್ಸ್ ಒಲಿವರ್, ಅನ್ವಿತ, ಯೂತ್ ರೆಡ್ ಕ್ರಾಸ್ ಘಟಕದ ನಾಯಕಿ ತೃಷ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ನಾಯಕರಾದ ಶ್ರವಣ್ ಶೆಟ್ಟಿ ಹಾಗೂ ಕ್ಲೀಟ ಫೆರ್ನಾಂಡಿಸ್ ಉಪಸ್ಥಿತರಿದ್ದರು.

Kinnigoli-27031902

Comments

comments

Comments are closed.

Read previous post:
ಏಳಿಂಜೆ ಕೃಷ್ಣ ಸಾಲ್ಯಾನ್ ಶ್ರದ್ಧಾಂಜಲಿ ಸಭೆ

ಕಿನ್ನಿಗೋಳಿ : ಏಳಿಂಜೆ ಕೃಷ್ಣ ಸಾಲ್ಯಾನ್ ಜನಪರ ಕಾಳಜಿ ಹಾಗು ಸಮಾಜ ಮುಖಿ ಚಿಂತನೆಯ ಕೆಲಸ ಕಾರ್ಯಗಳನ್ನು ಮಾಡಿ ಹೆಸರುಗಳಿಸಿದ್ದರು. ಅವರ ಅಗಲುವಿಕೆ ಕಿನ್ನಿಗೋಳಿ ಏಳಿಂಜೆ ಪರಿಸರದಲ್ಲಿ ತುಂಬಲಾರದ...

Close