ಸ್ವಚ್ಚತೆ ಮನದಲ್ಲಿ ಮೂಡಿದಾಗ ಶಾಂತಿ ನೆಮ್ಮದಿ

ಕಿನ್ನಿಗೋಳಿ : ಸ್ವಚ್ಚತೆ ಮನೆ ಮನದಲ್ಲಿ ಮೂಡಿದಾಗ ಶಾಂತಿ ನೆಮ್ಮದಿ ಸಾಧ್ಯ ಎಂದು ಪತ್ರಕರ್ತ ನರೇಂದ್ರ ಕೆರೆಕಾಡು ಹೇಳಿದರು.
ಕೆನರಾ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆ ಮಂಗಳೂರು (ಸಿಒಡಿಪಿ) ಪ್ರವರ್ತಿತ ಸ್ನೇಹ ಒಕ್ಕೂಟ ಕಿನ್ನಿಗೋಳಿ ಇದರ ೩೫ ಸದಸ್ಯ ಸ್ವಸಹಾಯ ಸಂಘಗಳ ವತಿಯಿಂದ ಸಸಿಹಿತ್ಲು ಬೀಚ್ ಪರಿಸರದ ಸ್ವಚ್ಚತಾ ಅಭಿಯಾನವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ನಮ್ಮ ಪರಿಸರವನ್ನು ನಾವೇ ಸ್ವಚ್ಚಮಾಡುವ ಮೂಲಕ ಗಾಂದೀಜಿಯವರ ಸ್ವಚ್ಚ ಭಾರತ್ ಕನಸನ್ನು ನನಸು ಮಾಡಲು ಸಾಧ್ಯವಿದೆ. ಸಿಒಡಿಪಿ ಸಂಸ್ಥೆ ಸ್ವಸಹಾಯ ಸಂಘಗಳ ಮೂಲಕ ಗ್ರಾಮೀಣ ಪರಿಸರದಲ್ಲಿ ನೀಡುವ ಸೇವೆ ಅಭಿನಂದನೀಯ ಎಂದರು.
ಈ ಸಂದರ್ಭ ಸ್ನೇಹ ಒಕ್ಕೂಟದ ಅಧ್ಯಕ್ಷ ರೋಕಿ ಸಲ್ಡಾನಾ, ಸಿಒಡಿಪಿ ಸಂಯೋಜಕ ರವಿ ಕುಮಾರ್ ಕ್ರಾಸ್ತಾ, ಸಿಒಡಿಪಿಯ ಪುಷ್ಪವೇಣಿ, ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು. ಸುಮಾರು ೨೦೦ಕ್ಕೂ ಅಧಿಕ ಸದಸ್ಯರು ಸ್ವಚ್ಚತಾ ಅಭಿಯಾನದಲ್ಲಿ ಭಾಗಿಯಾದರು.

Kinnigoli-28031902

Comments

comments

Comments are closed.

Read previous post:
Kinnigoli-28031901
ಅರಸುಕುಂಜಿರಾಯ ದೈವಸ್ಥಾನ ಧ್ವಜಾರೋಹಣ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಅತ್ತೂರು ಅರಸುಕುಂಜಿರಾಯ ದೈವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಗುರುವಾರ ದ್ವಜಾರೋಹಣ ನಡೆಯಿತು.

Close