ಧಾರ್ಮಿಕ ನಂಬಿಕೆ ಮನಸ್ಸಿಗೆ ನೆಮ್ಮದಿ

ಕಿನ್ನಿಗೋಳಿ : ತುಳುನಾಡು ಭಾರತದ ಧಾರ್ಮಿಕ ನೆಲೆಬೀಡಾಗಿದೆ. ಧಾರ್ಮಿಕ ನಂಬಿಕೆ ಮೈಗೂಡಿಸಿದಾಗ ಮನಸ್ಸಿನಲ್ಲಿ ನೆಮ್ಮದಿ ನೆಲಸುತ್ತದೆ. ಮಕ್ಕಳಲ್ಲಿ ಶಿಕ್ಷಣದ ಜೊತೆ ಸಂಸ್ಕ್ರತಿ ಸಂಸ್ಕಾರ ಕಲಿಸುವ ಕೆಲಸ ನಮ್ಮದಾಗಬೇಕು ಎಂದು ಧಾರ್ಮಿಕ ಚಿಂತಕ ವಾದಿರಾಜ ಉಪಾಧ್ಯಾಯ ಕೊಲೆಕಾಡಿ ಹೇಳಿದರು
ಅತ್ತೂರು ಅರಸು ಕುಂಜಿರಾಯ ವಾರ್ಷಿಕ ನೇಮೋತ್ಸವದ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಉಪಾನ್ಯಾಸ ನೀಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಿರೆ ವಿಶ್ವನಾಥ ಶೆಟ್ಟಿ ದೈವ ದೇವಳಗಳ ಅಭಿವೃದ್ದಿಯಿಂದ ನಮ್ಮ ಸಂಸ್ಕೃತಿ ಸಂಸ್ಕಾರ ಬೆಳೆಯುತ್ತದೆ. ಅತ್ತೂರು ಕುಂಜಿರಾಯ ದೈವಸ್ಥಾನದ ಪಲ್ಲಕ್ಕಿಯ ಪವಾಡದಿಂದ ನಮ್ಮ ದೈವ ದೇವರುಗಳ ಕಾರಣಿಕ ಏನೆಂಬುದು ತಿಳಿಯುತ್ತದೆ ಎಂದರು.
ಅತ್ತೂರು ಮೂಡ್ರಗುತ್ತು ಸುಧಾಕರ ಗುತ್ತಿನಾರ್, ಮಾನಂಪಾಡಿ ಭೋಜ ಗುತ್ತಿನಾರ್, ಕುಳಾಯಿ ಗುತ್ತಿನಾರ್ ಶಂಕರ್ ರೈ, ಪಂಜ ನಲ್ಯಗುತ್ತು ಭೋಜ ಗುತ್ತಿನಾರ್ ಅವರನ್ನು ಗೌರವಿಸಲಾಯಿತು. ಸೈನಿಕರಾದ ಜಗದೀಶ್ ಕೆಮ್ರಾಲ್, ದಿನೇಶ್ ಕುಲಾಲ್, ಮತ್ತು ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದ ನೋವೆಲ್ ಡಿಸೋಜ, ಅರವಿಂದ್ ಭಟ್ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಅತ್ಯಧಿಕ ಅಂಕ ಪಡೆದ ಸ್ಥಳೀಯ ಪ್ರತಿಭೆಗಳಾದ ಸೌರಭ್ ಪಿ, ದೀಕ್ಷಿತಾ, ರಿತೇಶ್, ಅನಿತಾ ಜಿ ಬಂಗೇರ, ಆಶಿಕಾ, ವಿಘ್ನೇಶ್ ಪಿ ಉಡುಪ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು, ರಾಮಕೃಷ್ಣ ಶೆಟ್ಟಿ, ಮಹಮ್ಮದ್ ಶೇಖ್, ರತ್ನದಾಸ್ ಅವರಿಗೆ ವೈದ್ಯಕೀಯ ಚಿಕಿತ್ಸೆಗೆ ಅರ್ಥಿಕ ಸಹಾಯ ನೀಡಲಾಯಿತು.
ಶಿಬರೂರು ಕೊಡಮಣಿತ್ತಾಯ ದೈವಸ್ಥಾನದ ಎಸ್ ವಾಸುದೇವ ಶಿಬರಾಯ ಆಶೀರ್ವಾಚನಗೈದರು.
ಈ ಸಂದರ್ಭ ವಾಮನ್ ಕುಮಾರ್ ಶೆಟ್ಟಿ ಮಧ್ಯಗುತ್ತು, ನಂದಳಿಕೆ ಮಹಾಲಿಂಗೇಶ್ವರ ದೇವಳದ ಸುಹಾಸ್ ಹೆಗ್ಡೆ, ರಾಮಚಂದ್ರ ನಾಯಕ್ ಕೊಲ್ನಾಡಗುತ್ತು, ಕಟೀಲು ಆರು ಮೇಳಗಳ ಸಂಚಾಲಕ ದೇವಿಪ್ರಸಾದ್ ಶೆಟ್ಟಿ, ಗಣೇಶ್ ವಿ ಶೆಟ್ಟಿ ಐಕಳ, ಸುಪ್ರೀತ್ ರೈ ಪಡು ನೀರುಮಾರ್ಗ, ವಿನಾಯಕ ಮಿತ್ರಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿಗಾರ್, ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚರಣ್ ಜೆ ಶೆಟ್ಟಿ ಕೊಜಪಾಡಿ ಬಾಳಿಕೆ, ಅಖಿಲಾಂಡೇಶ್ವರಿ ಮಹಿಳಾ ಸೇವಾ ಸಮಿತಿಯ ಅಧ್ಯಕ್ಷೆ ಜಯಂತಿ ಶೆಟ್ಟಿ ಅತ್ತೂರು ಭಂಡಾರ ಮನೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಸನ್ನ ಶೆಟ್ಟಿ ಅತ್ತೂರುಗುತ್ತು ಪ್ರಸ್ತಾವನೆಗೈದರು. ಶಿಕ್ಷಕ ಸಾಯಿನಾಥ ಶೆಟ್ಟಿ ನಿರೂಪಿಸಿದರು.

Kinnigoli-29031903

Comments

comments

Comments are closed.

Read previous post:
Kinnigoli-29031902
ಅತ್ತೂರು : ವಾರ್ಷಿಕ ನೇಮೋತ್ಸವ

ಕಿನ್ನಿಗೋಳಿ : ಅತ್ತೂರು ಅರಸುಕುಂಜಿರಾಯ ದೈವಸ್ಥಾನದಲ್ಲಿ ಗುರುವಾರ ವಾರ್ಷಿಕ ನೇಮೋತ್ಸವ ನಡೆಯಿತು.

Close