ಬಿಜೆಪಿ ಪೇಜ್ ಪ್ರಮುಖರ ಸಮಾವೇಶ

ಕಿನ್ನಿಗೋಳಿ : ಪ್ರಧಾನಿ ನರೇಂದ್ರ ಮೋದಿಯವರು ಅಭಿವೃದ್ಧಿ ಜನಪರ ಕಾರ್ಯಗಳಿಂದ ದೇಶ ವಿದೇಶಗಳಲ್ಲಿ ಜನಪ್ರಿಯತೆ ಹೊಂದಿದ್ದಾರೆ. ಇದು ಅವರ ಪ್ರಾಮಾಣಿಕತೆ ಹಾಗೂ ಪಾರದರ್ಶಕ ಆಡಳಿತದ ಫಲ. ಕಾಂಗ್ರೆಸ್ ನ ಅವನತಿಗೆ ಜೆಡಿಎಸ್ ಕಾರಣ ಎಂಬ ಗುಮಾನಿ ಜನರಲ್ಲಿ ಮೂಡುತ್ತಿದೆ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕಿನ್ನಿಗೋಳಿಯ ಯುಗಪುರುಷ ಸಭಾ ಭವನದಲ್ಲಿ ಶನಿವಾರ ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಬಿಜೆಪಿ ಪೇಜ್ ಪ್ರಮುಖ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನ ಗ್ರಾಮ ಪಂಚಾಯಿತಿ ಸದಸ್ಯನಿಲ್ಲದ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ನಿಂತಿದೆ. ಅದರಲ್ಲೂ ಕಾಂಗ್ರೆಸ್‌ನ ಅಭ್ಯರ್ಥಿ ಜೆಡಿಎಸ್‌ನ ಅನಧಿಕೃತವಾಗಿ ಚುನಾವಣೆಯ ಕಣದಲ್ಲಿರುವುದು ಪ್ರಶ್ನಾರ್ಥಕವಾಗಿದೆ ಎಂದರು.
ಬಿಜೆಪಿ ದ.ಕ. ಲೋಕಸಭಾ ಅಭ್ಯರ್ಥಿ ನಳಿನ್‌ಕುಮಾರ್ ಕಟೀಲು ಮಾತನಾಡಿ, ವಿರೋಧ ಪಕ್ಷದ ನಾಯಕರಾದ ಜನಾರ್ದನ ಪೂಜಾರಿ, ಮುಲಾಯಂ ಸಿಂಗ್ ಯಾದವ್, ಶೀಲಾ ದೀಕ್ಷಿತ್‌ರಂತಹ ಹಿರಿಯ ನಾಯಕರೇ ಇಂದು ಬಹಿರಂಗವಾಗಿ ನರೇಂದ್ರ ಮೋದಿಯ ಆಡಲಿತ ಮೆಚ್ಚಿದ್ದಾರೆ. ಜಿಲ್ಲೆಗೆ ಬಿಜೆಪಿ ಆಡಳಿತದ ಕೇಂದ್ರ ಸರಕಾರದಿಂದ ದಾಖಲೆಯ ೧೬೫೨೦ ಕೋ.ರೂ.ಗಳನ್ನು ವಿವಿಧ ಆನುದಾನದ ರೂಪದಲ್ಲಿ ತಂದಿರುವುದನ್ನು ದಾಖಲೆಗಳ ಸಹಿತ ನೀಡಲು ಬದ್ಧನಾಗಿದ್ದೇನೆ. ವೃಥಾ ಆರೋಪ ಸಲ್ಲದು ಎಂದರು.
ಮುಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಆದರ್ಶ ಹಾಗೂ ಸರಳತೆಯ ಸಂಸದ ಜನಮಾನಸರಾಗಿರುವ ನಳಿನ್‌ಕುಮಾರ್ ಕಟೀಲು ಅವರನ್ನು ಜನ ಮೆಚ್ಚಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಕಳೆದ ಭಾರಿಯ ಮತಕ್ಕಿಂತ ಹೆಚ್ಚುವರಿಯಾಗಿ ಪಡೆಯಲಿದ್ದೇವೆ ಎಂಬ ಭರವಸೆ ನಮಗಿದೆ ಎಂದು ಹೇಳಿದರು.
ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಈಶ್ವರ ಕಟೀಲು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಶುಕ್ರವಾರ ನಿಧನರಾದ ಬಿಜೆಪಿ ಕಾರ್ಯಕರ್ತ ಸಂಪತ್‌ಕುಮಾರ್ ಜೈನ್ ಪಡುಪಣಂಬೂರು ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಬಂಟ್ವಾಳದ ಶಾಸಕ ರಾಜೇಶ್ ನಾಯ್ಕ್, ದ.ಕ. ಜಿಲ್ಲಾಧ್ಯಕ್ಷ ಹಾಗೂ ಪುತ್ತೂರು ಶಾಸಕ ಸಂಜೀವ ಮಠಂದೂರು, ಮಾಜಿ ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಕ್ಷೇತ್ರದ ಚುನಾವಣಾ ಉಸ್ತುವಾರಿ ಎ.ವಿ.ತೀರ್ಥರಾಮ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್, ಉಪಾಧ್ಯಕ್ಷ ರವಿಶಂಕರ್ ಮಿಜಾರು, ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಸುಕೇಶ್ ಶೆಟ್ಟಿ ಶಿರ್ತಾಡಿ, ಜಯಾನಂದ ಮೂಲ್ಕಿ, ಚುನಾವಣಾ ಮಾಧ್ಯಮ ಪ್ರಚಾರಕ್ ಕೆ.ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು.

Kinnigoli-30031902

Comments

comments

Comments are closed.

Read previous post:
Kinnigoli-30031901
ಸಸಿಹಿತ್ಲು ನಡಾವಳಿ

ಕಿನ್ನಿಗೋಳಿ : ಸಸಿಹಿತ್ಲು ಶ್ರೀ ಭಗವತೀ ದೇವಳದಲ್ಲಿ ನಡಾವಳಿ ಮಹೋತ್ಸವದ ಅಂಗವಾಗಿ ಶನಿವಾರ ಮುಂಜಾನೆ ವಿಶೇಷ ಪಲ್ಲಕ್ಕಿ ಉತ್ಸವ ಮೂರ್ತಿ ಬಲಿ ಉತ್ಸವ ನಡೆಯಿತು.

Close