ಕಟೀಲು: ಮತದಾನ ಜಾಗೃತಿ ಅಭಿಯಾನ

ಕಿನ್ನಿಗೋಳಿ : ಪ್ರಜಾಪ್ರಭುತ್ವದ ಅರ್ಥವನ್ನು ಸಾಕಾರಗೊಳಿಸಲು ಹಣ, ಹೆಂಡದಂತಹ ಅಮಿಷಕ್ಕೆ ಒಳಗಾಗದೆ ಮತದಾನ ಮಾಡಲೇಬೇಕಾಗಿದೆ. ಸಮರ್ಥ ಅಭ್ಯರ್ಥಿಯನ್ನು ಚುನಾಯಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಕಟೀಲು ನಂದಿನಿ ವಿವಿಧ್ದೋದೇಶ ಸೌಹಾರ್ದ ಸಹಕಾರಿ (ನಿ) ಅಧ್ಯಕ್ಷ ನೀಲಯ್ಯ ಕೋಟ್ಯಾನ್ ಕಟೀಲು ಹೇಳಿದರು.
ಭಾನುವಾರ ಕಟೀಲು ಬಸ್ ನಿಲ್ದಾಣದಲ್ಲಿ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸೋರ್ಟ್ಸ್ ಕ್ಲಬ್, ದ. ಕ ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ದ. ಕ. ಜಿಲ್ಲಾ ಸ್ವೀಪ್ ಸಮಿತಿ, ನೆಹರು ಯುವ ಕೇಂದ್ರ ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ಭಾರತ ಚುನಾವಣಾ ಆಯೋಗ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಅಭಿಯಾನ -2019 ಬೀದಿ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಕಟೀಲು ನಂದಿನಿ ವಿವಿಧ್ದೋದೇಶ ಸೌಹಾರ್ದ ಸಂಸ್ಥೆಯ ಮುಖ್ಯ ನಿರ್ವಾಹಕ ಶಶಿಧರ ಶೆಟ್ಟಿ ಕೆರಮ, ಎಕ್ಕಾರು ವಿಜಯ ಯುವ ಸಂಗಮದ ಅಧ್ಯಕ್ಷ ದೀಕ್ಷಿತ್, ರಾಜೇಂದ್ರ ಪ್ರಸಾದ್ ಎಕ್ಕಾರು, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಗಿರೀಶ್ ಶೆಟ್ಟಿ ಎಕ್ಕಾರು, ಕಟೀಲು ಸೋರ್ಟ್ಸ್ ಎಂಡ್ ಗೇಮ್ಸ್ ಕ್ಲಬ್‌ನ ಕೇಶವ ಕಟೀಲು ಮತ್ತಿತರು ಉಪಸಿತರಿದ್ದರು.
ಸಂತೋಷ್ ದೇವಾಡಿಗ ಪ್ರತಿಜ್ಞಾ ವಿಧಿ ಭೊಧಿಸಿದರು.
ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸೋರ್ಟ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಕುಮಾರ್ ಬೇಕಲ್, ಸಂತೋಷ್ ಕುಮಾರ್, ಸುರೇಶ್ ಶೆಟ್ಟಿ, ದೀಪಕ್ ಸುವರ್ಣ, ಧರ್ಮಾನಂದ ಶೆಟ್ಟಿಗಾರ್, ಜಗದೀಶ್ ಕುಮಾರ್, ಸುನಿಲ್ ಜಿ. ದೇವಾಡಿಗ, ಜಯಂತ್ ಕುಂದರ್, ಸುಶಾಂತ್ ದೇವಾಡಿಗ, ಚೇತನ್ ಅವರು ಬೀದಿ ನಾಟಕ ಪ್ರದರ್ಶಿಸಿದರು.
ಕಾರ್ಯಕ್ರಮಕ್ಕೆ ದುರ್ಗಾಂಬಿಕ ಯುವಕ ಮಂಡಲ ಗಿಡಿಗೆರೆ ಹಾಗೂ ಇನ್ನಿತರ ಸಂಘ ಸಂಸ್ಥೆ ಸಹಕಾರ ನೀಡಿದರು.

Kinnigoli-31031901

Comments

comments

Comments are closed.

Read previous post:
ಸೇನೆಯ ಯಶಸ್ಸನ್ನು ರಾಜಕಾರಣಕ್ಕೆ ಬಳಸಿಕೊಂಡಿಲ್ಲ

 ಕಿನ್ನಿಗೋಳಿ : ಭಾರತೀಯ ಸೇನೆಯ ಯಶಸ್ಸನ್ನು ಬಿಜೆಪಿ ರಾಜಕಾರಣಕ್ಕೆ ಬಳಸಿಕೊಂಡಿಲ್ಲ ಆದರೆ ಸೈನ್ಯಕ್ಕೆ ಧೈರ್ಯ ತುಂಬಿದ ನರೇಂದ್ರ ಮೋದಿಯರ ವರ್ಚಸ್ಸನ್ನು ಬಳಸಿಕೊಳ್ಳಲು ಬಿಜೆಪಿಗೆ ಹಿಂಜರಿಕೆ ಎಂದಿಗೂ ಇಲ್ಲ ಎಂದು...

Close