ಸೇನೆಯ ಯಶಸ್ಸನ್ನು ರಾಜಕಾರಣಕ್ಕೆ ಬಳಸಿಕೊಂಡಿಲ್ಲ

 ಕಿನ್ನಿಗೋಳಿ : ಭಾರತೀಯ ಸೇನೆಯ ಯಶಸ್ಸನ್ನು ಬಿಜೆಪಿ ರಾಜಕಾರಣಕ್ಕೆ ಬಳಸಿಕೊಂಡಿಲ್ಲ ಆದರೆ ಸೈನ್ಯಕ್ಕೆ ಧೈರ್ಯ ತುಂಬಿದ ನರೇಂದ್ರ ಮೋದಿಯರ ವರ್ಚಸ್ಸನ್ನು ಬಳಸಿಕೊಳ್ಳಲು ಬಿಜೆಪಿಗೆ ಹಿಂಜರಿಕೆ ಎಂದಿಗೂ ಇಲ್ಲ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಮಾಜಿ ಯೋಧ ಗಣೇಶ್ ಕಾರ್ಣಿಕ್ ಹೇಳಿದರು.
ಕಿನ್ನಿಗೋಳಿ ಯುಗಪುರುಷದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಹಿಂದೆ ಇದ್ದ ಕಾಂಗ್ರೆಸ್ ಸರಕಾರ ಸೈನಿಕರನ್ನು ಕಟ್ಟಿಹಾಕಿದ್ದರಿಂದಲೇ ಅನೇಕ ದಾಳಿಗಳು ದೇಶದ ಮೇಲೆ ಆಗಿದೆ. ನಮ್ಮ ದೇಶದ ಆಗಿನ ಜನಪ್ರತಿನಿಧಿಗಳು ಸೈನಿಕರನ್ನು ದಾಳಿಗೆ ಸೂಚಿಸಲಿಲ್ಲ ಆದರೆ ಇಂದು ದೇಶದ ರಕ್ಷಣೆ ಬಗ್ಗೆ ಇರುವ ಕಾಳಜಿಯಿಂದ ನರೇಂದ್ರ ಮೋದಿ ಅವರು ಹಿಮ್ಮೆಟ್ಟಿಸುವ ಧೈರ್ಯವನ್ನು ಸೈನಿಕರಿಗೆ ನೀಡಿದ್ದಾರೆ ಇದು ರಾಜಕಾರಣದ ಬದಲಾವಣೆಯ ಸಂಕೇತ. ರಾಷ್ಟ್ರದ ಭದ್ರತೆ ಅಭಿವೃದ್ದಿ ಗಮನವಿಟ್ಟುಕೊಂಡು ದೇಶ ವಿದೇಶಗಳಲ್ಲಿ ಅನಿವಾಸಿ ಭಾರತೀಯರು ಸಾಮಾಜಿಕ ಜಾಲತಾಣಗಳಲ್ಲಿ ಮೋದಿಗೆ ಮೆಚ್ಚುಗೆ ಪಡಿಸುತ್ತಿರುವುದು ಅವರ ಅಭಿವೃದ್ಧಿಪರ ಕೆಲಸವೇ ಕಾರಣ ಎಂದರು.
ದ.ಕ. ಲೋಕ ಸಭಾ ಬಿಜೆಪಿ ಅಭ್ಯರ್ಥಿ ನಳಿನ್‌ಕುಮಾರ್ ಕಟೀಲು ಮಾತನಾಡಿ, ವಿರೋಧ ಪಕ್ಷದವರು ಯುವ ನಾಯಕನನ್ನು ತಮ್ಮೆದುರು ನಿಲ್ಲಿಸಿದ್ದರೂ ಯುವ ಮತದಾರರ ಒಲವು ನರೇಂದ್ರ ಮೋದಿಯವರ ಮೇಲಿರುವುದರಿಂದ ಬಿಜೆಪಿ ಹಿಂದಿಕ್ಕಿಂತ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಲಿದ್ದೇವೆ. ತಳ ಮಟ್ಟದಲ್ಲಿನ ಕಾರ್ಯಕರ್ತರ ಶ್ರಮ ಪೇಜ್ ಪ್ರಮುಖ್ ವರೆಗೆ ಹಬ್ಬಿರುವುದರಿಂದ ಪಕ್ಷ ಸಂಘಟನೆಯೇ ಗೆಲುವಿನ ಮೂಲ ಎಂದರು.
ಕರ್ನಾಟಕ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ ರಾಜ್ಯದಲ್ಲಿರುವ ಸಮ್ಮಿಶ್ರ ಸರಕಾರದ ಆಡಳಿತ ವೈಫಲ್ಯ, ವಂಶಪಾರಂಪರೆಯ ರಾಜಕಾರಣ, ಅಭಿವೃದ್ಧಿ ರಹಿತ ಆಡಳಿತ, ಪಂಚಾಯಿತಿಗೆ ೧೪ನೇ ಹಣಕಾಸು ಯೋಜನೆಯಡಿಯಲ್ಲಿ ಬಿಡುಗಡೆಯಾಗದ ವೈಫಲ್ಯಗಳು ಬಿಜೆಪಿಗೆ ಪ್ರಚಾರಕ್ಕೆ ವರದಾನವಾಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ೧೮ ಸಾವಿರ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ, ೮ ಕೋಟಿ ಮಂದಿಗೆ ಅನಿಲ ಸಂಪರ್ಕ ಸಿಕ್ಕಿದೆ. ಆಯುಷ್‌ಮಾನ್, ಭಯೋತ್ಪಾದನೆ ಬಗ್ಗೆ ದಿಟ್ಟ ನಡೆ, ಭ್ರಷ್ಟಾಚಾರ ರಹಿತ ಆಡಳಿತದಿಂದ ಮೋದಿಯವರನ್ನು ದೇಶದಲ್ಲೆಡೆ ಮೆಚ್ಚಿಕೊಂಡಿದ್ದಾರೆ. ಕರ್ನಾಟಕದಲ್ಲಿ 22ರಿಂದ 25 ಸ್ಥಾನಗಳು ಖಚಿತವಾಗಿ ದೊರಯಲಿದೆ ಎಂದರು.
ಶಾಸಕರಾದ ಉಮಾನಾಥ ಕೋಟ್ಯಾನ್, ರಾಜೇಶ್ ನಾಯಕ್, ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಈಶ್ವರ ಕಟೀಲು, ಪದಾಧಿಕಾರಿಗಳಾದ ಸುದರ್ಶನ್ ಮೂಡಬಿದಿರೆ, ವಿನೋದ್‌ಕುಮಾರ್ ಬೊಳ್ಳೂರು, ಕೆ.ಭುವನಾಭಿರಾಮ ಉಡುಪ, ದೇವಪ್ರಸಾದ ಪುನರೂರು ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli-30031902
ಬಿಜೆಪಿ ಪೇಜ್ ಪ್ರಮುಖರ ಸಮಾವೇಶ

ಕಿನ್ನಿಗೋಳಿ : ಪ್ರಧಾನಿ ನರೇಂದ್ರ ಮೋದಿಯವರು ಅಭಿವೃದ್ಧಿ ಜನಪರ ಕಾರ್ಯಗಳಿಂದ ದೇಶ ವಿದೇಶಗಳಲ್ಲಿ ಜನಪ್ರಿಯತೆ ಹೊಂದಿದ್ದಾರೆ. ಇದು ಅವರ ಪ್ರಾಮಾಣಿಕತೆ ಹಾಗೂ ಪಾರದರ್ಶಕ ಆಡಳಿತದ ಫಲ. ಕಾಂಗ್ರೆಸ್ ನ...

Close