ಹಳೆಯಂಗಡಿ : ಮತದಾನ ಪ್ರಾತ್ಯಕ್ಷಿಕೆ

ಕಿನ್ನಿಗೋಳಿ : ಮತದಾನದ ಹಕ್ಕು ಮತ್ತು ಮಹತ್ವ ತಿಳಿದಲ್ಲಿ ಪ್ರತಿಯೊಬ್ಬರು ಸ್ವಯಂ ಪ್ರೇರಣೆಯಿಂದ ಮತದಾನ ಮಾಡುತ್ತಾರೆ. ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಮತದಾನ ಹೇಗೆ ಮತ್ತು ಏಕೆ ಎಂಬ ಜಾಗೃತಿ ಮೂಡಿಸುವ ಪ್ರಯತ್ನ ಸ್ವೀಪ್ ಘಟಕ ನಡೆಸುತ್ತಿದೆ ಎಂದು ಪಡುಪಣಂಬೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಿತಾ ಕ್ಯಾಥರಿನ್ ಹೇಳಿದರು.
ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಸಭಾಂಗಣದಲ್ಲಿ ಮಂಗಳೂರು ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶ್ರೀ ವಿದ್ಯಾವಿನಾಯಕ ಯುವಕ ಮಂಡಲ, ಶ್ರೀ ವಿದ್ಯಾವಿನಾಯಕ ರಜತ ಸೇವಾ ಟ್ರಸ್ಟ್, ಹಳೆಯಂಗಡಿ ಯುವತಿ ಮತ್ತು ಮಹಿಳಾ ಮಂಡಳಿ, ಪಕ್ಷಿಕೆರೆ ಶ್ರೀ ವಿನಾಯಕ ಮಿತ್ರ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಡೆದ ಮತದಾರರ ಪ್ರತಿಜ್ಞಾ ವಿಧಿ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಭೋಧಿಸಿ ಮಾತನಾಡಿದರು.
ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ರಾಜೇಂದ್ರಕುಮಾರ್ ಇವಿಎಂ ವೋಟಿಂಗ್ ಮೆಷಿನ್ ಮತ್ತು ಬಳಕೆಯ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಈ ಸಂದರ್ಭ ಯುವಕ ಮಂಡಲದ ಸದಸ್ಯರು ಮತದಾನದ ಮಹತ್ವದ ಬಗ್ಗೆ ಬೀದಿ ನಾಟಕ ಪ್ರದರ್ಶನ ನೀಡಿದರು.
ಬೀದಿ ನಾಟಕ ಪ್ರದರ್ಶನ ತಂಡದಲ್ಲಿ ಯುವಕ ಮಂಡಲದ ಯತೀಶ್ ಕೋಟ್ಯಾನ್, ಪ್ರದೀಪ್ ಕೆ. ಪಿ., ಶಿವಪ್ರsಸಾದ್ ಕೊಪ್ಪಲ, ಶಿವರಾಜ್, ಸುದರ್ಶನ್ ಆಚಾರ್ಯ, ದಿವ್ಯಶ್ರೀ ರಮೇಶ್ ಕೋಟ್ಯಾನ್, ವಿದ್ಯಾಶ್ರೀ ರಮೇಶ್ ಕೋಟ್ಯಾನ್, ರಶ್ವಿತ ಶೆಟ್ಟಿ, ರಕ್ಷಿತಾ, ಪ್ರಣವೀ, ನಿಧಿ, ಹರ್ಷಿತಾ ಶೆಟ್ಟಿಗಾರ್ ಕಲಾವಿದರಾಗಿ ಸಹಕರಿಸಿದರು. ಅಕ್ಷತಾ ನವೀನ್ ಶೆಟ್ಟಿ ಬೀದಿ ನಾಟಕ ಕಲಾವಿದರಿಗೆ ನಿದೇರ್ಶನ ನೀಡಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಶಂಕರ ಸುವರ್ಣ, ಯುವಕ ಮಂಡಲದ ಸಲಹಾ ಸಮಿತಿಯ ಅಧ್ಯಕ್ಷ ಸದಾಶಿವ ಅಂಚನ್ ಚಿಲಿಂಬಿ, ಹಳೆಯಂಗಡಿ ಮಹಿಳಾ ಮಂಡಳಿಯ ಅಧ್ಯಕ್ಷೆ ಸುಜಾತಾ ವಾಸುದೇವ, ಯುವತಿ ಮಂಡಲದ ಅಧ್ಯಕ್ಷೆ ದಿವ್ಯಶ್ರಿ ರಮೇಶ್ ಕೋಟ್ಯಾನ್, ಪಕ್ಷಿಕೆರೆ ಶ್ರೀ ವಿನಾಯಕ ಮಿತ್ರ ಮಂಡಳಿಯ ಅಧ್ಯಕ್ಷ ಉಮೇಶ್ ಶೆಟ್ಟಿಗಾರ್, ಯುವಕ ಮಂಡಲದ ಅಧ್ಯಕ್ಷ ಸುಧಾಕರ ಆರ್. ಅಮೀನ್, ಪಕ್ಷಿಕೆರೆ ಶ್ರೀ ವಿನಾಯಕ ಮಿತ್ರ ಮಂಡಳಿಯ ಸ್ಥಾಪಕಾಧ್ಯಕ್ಷ ರಾಜೇಶ್‌ದಾಸ್, ರಜತ ಸೇವಾ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಯ್ಟಾನಿ ಡಿ ಕೋಸ್ತ ಮತ್ತು ಯೊಗೀಶ್ ಪಾವಂಜೆ ಉಪಸ್ಥಿತರಿದ್ದರು.
ರಾಮದಾಸ ಪಾವಂಜೆ ಮತ್ತು ಸುಧಾಕರ್ ಆರ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

Kinnigoli-01041905

Comments

comments

Comments are closed.

Read previous post:
Kinnigoli-01041904
ಕರ್ಣಾಟಕ ಬ್ಯಾಂಕ್ ಸಿಬ್ಬಂದಿ ಸನ್ಮಾನ

ಕಿನ್ನಿಗೋಳಿ : ಐಕಳ ಕರ್ಣಾಟಕ ಬ್ಯಾಂಕ್‌ನ ಸಿಬ್ಬಂದಿ ಕಾವೇರಿ ಗುರುರಾಜ್ 33 ವರ್ಷ ಸುದೀರ್ಘ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಹೊಂದಿದ್ದು ಅವರ ವಿದಾಯ ಕೂಟ ಶನಿವಾರ ನಡೆಯಿತು. ಐಕಳ...

Close