ಕಟೀಲು : ಮಾತೃವಂದನಾ, ಮಾತೃ ಭೋಜನ

ಕಿನ್ನಿಗೋಳಿ : ಭಾರತದಲ್ಲಿ ಅಮ್ಮ ಮಹತ್ತರವಾದ ಸ್ಥಾನವಿದ್ದು ಆಕೆ ದೇವತೆ ಪೂಜನೀಯಳು. ಪ್ರತಿಫಲಾಪೇಕ್ಷೆಯಿಲ್ಲದೆ ನಮ್ಮನ್ನು ಬೆಳೆಸುವ ಅಮ್ಮನಿಗೆ ನಾವೇನು ಕೊಟ್ಟೆವು ಎಂದು ಕೇಳಿಕೊಳ್ಳಬೇಕು ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಪ್ರಾಂತ್ರ್ಯ ಸಂಚಾಲಕ ಹರೀಶ್ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ವತಿಯಿಂದ ಕಟೀಲು ದೇವಳದ ಅಕ್ಷರಾನ್ನಂ ಸಭಾಂಗಣದಲ್ಲಿ ನಡೆಯುತ್ತಿರುವ ಯೋಗ ತರಗತಿ 48 ದಿನಗಳನ್ನು ಪೂರೈಸಿದ ಸಂದರ್ಭ ಆಯೋಜಿಸಲಾದ ಮಾತೃವಂದನೆ, ಮಾತೃ ಪೂಜನಾ ಹಾಗೂ ಮಾತೃಭೋಜನ ಕಾರ್ಯಕ್ರಮದಲ್ಲಿ ಮಾತನಾಡಿ ಯೋಗದಿಂದ ಮನಸ್ಸಿಗೆ ನೆಮ್ಮದಿ, ಶರೀರಕ್ಕೆ ಆರೋಗ್ಯ, ಆಧ್ಯಾತ್ಮದತ್ತ ಒಲವು ಮೂಡಲು ಸಾಧ್ಯವಾಗುತ್ತದೆ. ಪತಂಜಲಿ ಯೋಗ ಶಿಕ್ಷಣ ಸಮಿತಿ ನಡೆಸುವ ಮಂಗಳೂರು ಜಿಲ್ಲೆಯ ಯೋಗ ಶಿಬಿರಗಳಲ್ಲಿ 480 ರಷ್ಟು ಶಿಕ್ಷಕರಿದ್ದು, 150 ಕ್ಕೂ ಶಿಬಿರಗಳು ನಡೆಯುತ್ತಿವೆ. ಎಲ್ಲಿಯೂ ಪ್ರತಿಫಲಾಪೇಕ್ಷೆ ಇಲ್ಲ. ಫೀಸು ಪಡೆಯುವುದಿಲ್ಲ ಎಂದರು.
ಸಾಲು ದೀಪಗಳನ್ನಿಟ್ಟು ತಾಯಂದಿರನ್ನು ವಂದಿಸಲಾಯಿತು. ಸಭಿಕರಿಗೆ, ಮಕ್ಕಳಿಗೆ ಕೈತುತ್ತು ನೀಡಲಾಯಿತು.
ಯೋಗ ಶಿಬಿರದಲ್ಲಿ ಭಾಗವಹಿಸಿದವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಯೋಗ ಮಾಡಿ ಡಿಸ್ಕ್ ಸಮಸ್ಯೆ ಗುಣ ಆಗಿದೆ ಎಂದು ಪ್ರಮೋದ್, ಮಂಡಿ ನೋವು ಎಲ್ಲಿಗೆ ಹೋಯಿತೆಂದೇ ಗೊತ್ತಿಲ್ಲ ಎಂದು ಜಯಶ್ರೀ, ಯೋಗ ಮಾಡಿ ಬಿಪಿ ಮಾತ್ರೆ ಕೊಳ್ಳುವುದನ್ನು ನಿಲ್ಲಿಸಿದ್ದೇನೆ ಎಂದು ಲೋಕೇಶ್, ಮೈಗ್ರೇನ್ ದೂರವಾಗಿದೆ, ಕೋಪ ಕಡಿಮೆ ಆಗಿದೆ ಎಂದು ಜಯಂತಿ, ಬೆನ್ನು ನೋವು ಕಡಿಮೆಯಾಗಿದೆ. ಚಹಾ ಕುಡಿಯುವ ಚಟ ನಿಂತಿದೆ ಎಂದು ಭಾರತಿ, ಆವಾಗಾವಾಗ ಎಚ್ಚರವಾಗುವ ಸಮಸ್ಯೆ ದೂರವಾಗಿದೆ ಎಂದು ಜ್ಯೋತಿ ಉಡುಪ, ಗ್ಯಾಸ್ಟ್ರಿಕ್ ಕಡಿಮೆ ಆಗಿದೆ ಎಂದು ಶ್ರೀವತ್ಸ ಹೇಳಿಕೊಂಡರು.
ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ, ನೇತ್ರಾವತಿ ವಲಯದ ಕನಕ, ದಾಮೋದರ್ ಉಪಸ್ಥಿತರಿದ್ದರು.
ರೇಖಾ ಶೆಣೈ ಕಾಯರ್ಯಕ್ರಮ ನಿರೂಪಿಸಿದರು.
ಎಪ್ರಿಲ್ 1 ರಿಂದ ಮತ್ತೆ ಯೋಗ ಶಿಬಿರ ದಿನಂಪ್ರತಿ ಬೆಳಿಗ್ಗೆ 5 ಗಂಟೆಯಿಂದ 6 ರತನಕ ಕಟೀಲು ಅಕ್ಷರಾನ್ನಂ ಸಭಾಂಗಣದಲ್ಲಿ ಮುಂದುವರಿಯಲಿದೆ.

Kinnigoli-01041906 Kinnigoli-01041907

Comments

comments

Comments are closed.

Read previous post:
Kinnigoli-01041905
ಹಳೆಯಂಗಡಿ : ಮತದಾನ ಪ್ರಾತ್ಯಕ್ಷಿಕೆ

ಕಿನ್ನಿಗೋಳಿ : ಮತದಾನದ ಹಕ್ಕು ಮತ್ತು ಮಹತ್ವ ತಿಳಿದಲ್ಲಿ ಪ್ರತಿಯೊಬ್ಬರು ಸ್ವಯಂ ಪ್ರೇರಣೆಯಿಂದ ಮತದಾನ ಮಾಡುತ್ತಾರೆ. ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಮತದಾನ ಹೇಗೆ ಮತ್ತು ಏಕೆ ಎಂಬ ಜಾಗೃತಿ ಮೂಡಿಸುವ...

Close