ಮೂರ್ಖರ ದಿನದಂದು ಬೇಸ್ತು ಬಿದ್ದ ವ್ಯಾಪರಸ್ಥ

ಕಿನ್ನಿಗೋಳಿ : ಕಿನ್ನಿಗೋಳಿ ಮುಖ್ಯ ರಸ್ತೆಯ ಅಂಗಡಿಯೊಂದರಲ್ಲಿ ಮಕ್ಕಳ ಆಟಿಕೆಯ ನೋಟನ್ನು ಚಲಾಯಿಸಲು ಪ್ರಯತ್ನಿಸಿ ಬಾಲಕನೋರ್ವ ಅಂಗಡಿ ಮಾಲಕರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಘಟನೆ ನಡೆದಿದೆ.
ಬಾಲಕನನ್ನು ಮಹಮ್ಮದ್ ಅಲಿ ಎಂದು ಗುರುತಿಸಲಾಗಿದೆ. ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ರವಳನಾಥ ಮಲ್ಯ ಎಂಬುವವರ ಅಂಗಡಿಗೆ ಬಂದು 200 ರೂಪಾಯಿ ಆಟಿಕೆ ನೋಟು ನೀಡಿ ಕೊಟ್ಟು ಸಾಬೂನು ಕೇಳಿದ್ದು, ಅಂಗಡಿ ಮಾಲಕರಿಗೆ ಸಂಶಯ ಬಂದು ಬಾಲಕನನ್ನು ಉಪಾಯದಿಂದ ಅಂಗಡಿ ಒಳಗೆ ಕರೆದಾಗ ಬಾಲಕ ತಪ್ಪಿಸಲು ಪ್ರಯತ್ನಿಸಿದಾಗ ಅಂಗಡಿ ಮಾಲಕರು ಪರಿಸರದ ಜನರನ್ನು ಎಚ್ಚರಿಸಿದಾಗ ಸುತ್ತಮುತ್ತಲ ಅಂಗಡಿಯವರು ಇದನ್ನು ಗಮನಿಸಿ ಬಾಲಕನನ್ನು ಹಿಡಿದು ಮೂಲ್ಕಿ ಪೋಲೀಸರಿಗೆ ಹಸ್ತಾಂತರಿಸಿದ್ದಾರೆ. ಬಾಲಕನನ್ನು ಸಾರ್ವಜನಿಕರು ವಿಚಾರಿಸಿದಾಗ ಸರಿಯಾದ ಮಾಹಿತಿ ನೀಡಲಿಲ್ಲ. ಬಾಲಕ ಕಿನ್ನಿಗೋಳಿ ಸಮೀಪದ ಗುತ್ತಕಾಡು ಕಲ್ಕರೆ ನಿವಾಸಿಯಾಗಿದ್ದು, ಕಾರ್ನಾಡು ಸದಾಶಿವನಗರದ ಖಾಸಗಿ ಶಾಲೆಯೊಂದರಲ್ಲಿ ಕಲಿಯುತ್ತಿದ್ದಾನೆ. ಬಾಲಕ ಮಂಗಳೂರು ಟೋಕಿಯೋ ಬಜಾರ್‌ನಿಂದ ೨ ರೂಪಾಯಿಗೆ ಈ ಆಟಿಕೆಯ ನೋಟು ಖರೀದಿಸಿ ಚಲಾವಣೆಗೆ ಪ್ರಯತ್ನಿಸುತ್ತಿದ್ದ ಎಂದು ಹೇಳಲಾಗುತ್ತಿದೆ.
ಕಳೆದ ಕೆಲವು ದಿನಗಳಿಂದ ಕಿನ್ನಿಗೋಳಿಯ ಬೇರೆ ಬೇರೆ ಅಂಗಡಿಗಳಲ್ಲಿ ಇಂತಹ ನೋಟುಗಳ ಚಲಾವಣೆಗೆ ಬಾಲಕ ಮತ್ತವನ ಸಹಚರರು ಪ್ರಯತ್ನಿಸಿದಾಗ ಅಂಗಡಿ ಮಾಲಕರು ಅವರಿಗೆ ಬುದ್ದಿ ಹೇಳಿ ವಾಪಾಸ್ಸು ಕಳುಹಿಸಿದ್ದಾರೆ ಎಂದು ಸಾರ್ವಜನಿಕರು ಹೇಳಿತ್ತಿದ್ದರು. ಈ ತರದ ನೋಟುಗಳನ್ನು ಮುದ್ರಿಸಲು ಪರವಾನಿಗೆ ಕೊಡಬಾರದು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Kinnigoli-01041908 Kinnigoli-01041909

Comments

comments

Comments are closed.

Read previous post:
Kinnigoli-01041905
ಹಳೆಯಂಗಡಿ : ಮತದಾನ ಪ್ರಾತ್ಯಕ್ಷಿಕೆ

ಕಿನ್ನಿಗೋಳಿ : ಮತದಾನದ ಹಕ್ಕು ಮತ್ತು ಮಹತ್ವ ತಿಳಿದಲ್ಲಿ ಪ್ರತಿಯೊಬ್ಬರು ಸ್ವಯಂ ಪ್ರೇರಣೆಯಿಂದ ಮತದಾನ ಮಾಡುತ್ತಾರೆ. ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಮತದಾನ ಹೇಗೆ ಮತ್ತು ಏಕೆ ಎಂಬ ಜಾಗೃತಿ ಮೂಡಿಸುವ...

Close