ಮೂರ್ತೆದಾರರ ಸೇವಾ ಸಹಕಾರಿ ಸಂಘ

ಮೂಲ್ಕಿ : ವಿತ್ತ ಸಂಸ್ಥೆಗಳು ಗ್ರಾಮೀಣ ಬಡವರ್ಗದ ಜನರ ಶ್ರೇಯೋಬಿವೃದ್ಧಿಯನ್ನು ಮೂಲ ಗುರಿಯಾಗಿಸಿ ಅವರಿಗೆ ಸಾಲ ಸೌಲಭ್ಯಗಳನ್ನು ವಿತರಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು. ಮೂಲ್ಕಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಹೊಸ ಕಛೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಧನಿಕರು ತಮ್ಮಲ್ಲಿರುವ ಮೊತ್ತವನ್ನು ಗ್ರಾಮೀಣ ಸಹಕಾರಿ ಸಂಸ್ಥೆಯಲ್ಲಿ ಠೇವಣಿ ಇರಿಸಿ ಸಂಸ್ಥೆ ಬಡವರ್ಗಕ್ಕೆ ಸಾಲ ವಿತರಿಸುವ ಮೂಲಕ ಅವರನ್ನು ಸ್ವಾವಲಂಭಿಗಳನ್ನಾಗಿಸುವಂತೆ ಮಾಡುವುದು ಅತ್ಯುತ್ತಮ ಸೇವಾ ಕಾರ್ಯವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಯದೀಶ್ ಅಮೀನ್ ವಹಿಸಿದ್ದರು. ಅತಿಥಿಗಳಾಗಿ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಕಟ್ಟಡ ಸಮಿತಿ ಅಧ್ಯಕ್ಷ ವಿಠಲ ಅಮೀನ್, ಅಧ್ಯಕ್ಷ ಗೋಪೀನಾಥ ಪಡಂಗ, ಉದ್ಯಮಿಗಳಾಧ ಎಚ್.ರಾಮದಾಸ್ ಕಾಮತ್, ಪ್ರಕಾಶ ಸುವರ್ಣ ಉಪಸ್ಥಿತರಿದ್ದರು.
ಯದೀಶ್ ಅಮೀನ್ ಸ್ವಾಗತಿಸಿದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಜಯ ಕುಮಾರ್ ಕುಬೆವೂರು ನಿರೂಪಿಸಿ ವಂದಿಸಿದರು.

Mulki-01041901

Comments

comments

Comments are closed.

Read previous post:
Kinnigoli-31031902
ನೆಲ್ಲಿಮಾರ್ ಜಯಶಂಕರ ರೈ

ಕಿನ್ನಿಗೋಳಿ : ಕೊಡೆತ್ತೂರು ನೆಲ್ಲಿಮಾರ್ ಜಯಶಂಕರ ರೈ (68) ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ನಿಧನ ಹೊಂದಿದರು. ಮೃತರು ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾಗಿದ್ದು, ಕೊಡೆತ್ತೂರು ಅರಸು ಕುಂಜರಾಯ...

Close