ಗೋಳಿಜೋರ ಶ್ರೀ ರಾಮ ಯುವಕ ವೃಂದ

ಕಿನ್ನಿಗೋಳಿ : ಸಂಘ ಸಂಸ್ಥೆಗಳು ಗ್ರಾಮದ ಜನರ ಸಮಸ್ಯೆ ಹಾಗೂ ಜನಪರ ಕಾಳಜಿಯುತವಾದ ಸಮಾಜ ಸೇವೆ ಮಾಡಬೇಕು ಎಂದು ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಸಂತೋಷ್‌ಕುಮಾರ್ ಹೆಗ್ಡೆ ಹೇಳಿದರು.
ಗೋಳಿಜೋರ ಶ್ರೀ ರಾಮ ಯುವಕ ವೃಂದದ 33 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ನಿವೃತ್ತ ಪೋಲಿಸ್ ಅಧಿಕಾರಿ ಚಂದ್ರಹಾಸ ಶೆಟ್ಟಿಗಾರ್ ಹಾಗೂ ಕರ್ನಾಟಕ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಂಕರ ಮಾಸ್ಟರ್ ಅವರನ್ನು ಗೌರವಿಸಲಾಯಿತು. ಮೂಡಬಿದಿರೆ ಆಳ್ವಾಸ್ ಕಾಲೇಜು ಉಪನ್ಯಾಸಕಿ ಸುಧಾರಾಣಿ ಅಭಿನಂದನಾ ಭಾಷಣಗೈದರು.
ಕಟೀಲು ವಿವಿಧೋದ್ದಶ ಬ್ಯಾಂಕ್ ಉಪಾಧ್ಯಕ್ಷ ಸ್ಟ್ಯಾನಿ ಪಿಂಟೋ, ಗೋಳಿಜೋರ ಶ್ರೀ ಹರಿಹರ ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ಉಮೇಶ್ ಎನ್, ಉದ್ಯಮಿ ಸುಧಾಕರ ಶೆಟ್ಟಿ, ಶ್ರೀ ರಾಮ ಯುವಕ ವೃಂದದ ಮಾಜಿ ಅಧ್ಯಕ್ಷ ಚಂದ್ರಶೇಖರ್, ಅಂಗನವಾಡಿ ಮಾಜಿ ಶಿಕ್ಷಕಿ ಜುಲಿಯಾನ ಬರ್ಬೋಜ, ಸಂಘದ ಅಧ್ಯಕ್ಷ ದಿನೇಶ್ ಗೋಳಿಜೋರ ಉಪಸ್ಥಿತರಿದ್ದರು.
ಮನೋಜ್ ಕುಮಾರ್ ಸನ್ಮಾನ ಪತ್ರ ವಾಚಿಸಿದರು. ಪ್ರಕಾಶ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-03041902

Comments

comments

Comments are closed.

Read previous post:
Kinnigoli-03041901
ಹಳೆಯಂಗಡಿ ಯುವವಾಹಿನಿಗೆ

ಕಿನ್ನಿಗೋಳಿ : ಹಳೆಯಂಗಡಿ ಯುವವಾಹಿನಿ ಘಟಕದ ನೂತನ ಅಧ್ಯಕ್ಷರಾಗಿ ಅರುಣ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳು : ಹರೀಶ್ ಆರ್.ಅಮೀನ್ (ಉಪಾಧ್ಯಕ್ಷರು), ರಾಜೇಶ್ವರಿ ರಾಮನಗರ (ಕಾರ್ಯದರ್ಶಿ), ಚೇತನ್ ಎಸ್....

Close