ನರೇಂದ್ರ ಮೋದಿ ಮತ್ತೆ ಪ್ರಧಾನಿ ನಿಶ್ಚಿತ

ಕಿನ್ನಿಗೋಳಿ : ವಿಶ್ವದಲ್ಲಿ ಭಾರತವನ್ನು ಮೂಂಚೂಣಿಗೆ ತಂದ ನರೇಂದ್ರ ಮೋದಿಯವರನ್ನು ಮರಳಿ ಪ್ರಧಾನಿಯನ್ನಾಗಿ ಮಾಡಲು ರಾಜಕೀಯ ಮರೆತು ಸಾಮಾನ್ಯ ನಾಗರಿಕರು ಸಹ ಕೈ ಜೋಡಿಸಿರುವುದರಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ನಳಿನ್‌ಕುಮಾರ್ ಕಟೀಲು ಆಯ್ಕೆಯಾಗುವುದು ನಿಶ್ಚಿತ ಎಂದು ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು ಹೇಳಿದರು.
ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಹಳೆಯಂಗಡಿಯಲ್ಲಿ ಮೇರಾ ಬೂತ್ ಸಬ್ಸೆ ಮಜಬೂತ್ ಎಂಬ ಅಭಿಯಾನದ ಬಿಜೆಪಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಿನ್ನಿಗೋಳಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಶೆಟ್ಟಿ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಹಾಗೂ ಅಭ್ಯರ್ಥಿ ನಳಿನ್‌ಕುಮಾರ್ ಕಟೀಲು ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು.
ಮಾಜಿ ತಾಲೂಕು ಪಂಚಾಯಿತಿ ಸದಸ್ಯೆ ಸಾವಿತ್ರಿ, ಸಂಘ ಪರಿವಾರದ ಎಚ್.ರಾಮಚಂದ್ರ ಶೆಣೈ ಮತ್ತಿತರರು ಉಪಸ್ಥಿತರಿದ್ದರು.

Comments

comments

Comments are closed.

Read previous post:
ಗುಡ್‌ಪ್ರೈಡೆ ಪ್ರಯುಕ್ತ ಪ್ರಬಂಧ ಸ್ಪರ್ಧೆ

ಕಿನ್ನಿಗೋಳಿ : ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟ, ಹಳೆಯಂಗಡಿ ಹಾಗೂ ಹಳೆಯಂಗಡಿ ವಿಜಯ ಮಾಸ್ಟರ್ ಮೆಮೋರಿಯಲ್ ಟ್ರಸ್ಟ್ ಸಹಕಾರದಲ್ಲಿ ಗುಡ್‌ಫ್ರೈಡೆ ಪ್ರಯುಕ್ತ ಪ್ರಬಂಧ ಸ್ಪರ್ಧೆ ಜರಗಲಿದೆ. ಶುಭ ಶುಕ್ರವಾರದ...

Close