ಕಟೀಲು : ವಸಂತವೇದ ಶಿಬಿರ

 ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಾಗೂ ಸಂಜೀವನಿ ಚಾರಿಟೇಬಲ್ ಟ್ರಸ್ಟ್ ಮುಂಬೈ ಇವರ ಸಹಯೋಗದಲ್ಲಿ ಎಪ್ರಿಲ್ 13 ರಿಂದ ಮೇ 13 ರವರೆಗೆ 21 ದಿನಗಳ ಕಾಲ ಕಟೀಲು ದೇವಳದಲ್ಲಿ ವಸಂತ ವೇದ ಶಿಬಿರ ನಡೆಯಲಿದೆ ಎಂದು ಡಾ. ಸುರೇಶ್ ರಾವ್ ತಿಳಿಸಿದ್ದಾರೆ. ವಿಪ್ರ ಬಾಲಕರಿಗೆ ಗುರುಪರಂಪರಾ ಸ್ತೋತ್ರ, ಕೃಷ್ಣ ಅಷ್ಟೋತ್ತರ, ವೆಂಕಟೇಸ ಸ್ತೋತ್ರ, ಭಗವದ್ಗೀತೆ, ತ್ರಿಕಾಲ ಸಂಧ್ಯಾವಂದನ, ವೇದಪಾಠ, ಪುರುಷಸೂಕ್ತ, ಸಂಕೀರ್ತನೆ ಇತ್ಯಾದಿಗಳನ್ನಲ್ಲದೆ, ಬಾಲಕಿಯರಿಗೆ ತುಳಸಿ ಸಂಕೀರ್ತನೆ, ಲಕ್ಷ್ಮೀಶೋಭಾನೆ, ಬತ್ತಿ ತಯಾರಿ, ಕುಂಕಮ ತಯಾರಿ, ಶ್ಲೋಕಗಳು, ಸಂಕೀರ್ತನೆ, ರಂಗೋಲಿ, ಹೂಮಾಲೆ ಕಟ್ಟುವುದು ಹೀಗೆ ವಿವಿಧ ಪಾಠಗಳನ್ನು ಕಲಿಸಲಾಗುವುದು. ಆಸಕ್ತರು ಶ್ರೀವತ್ಸ 8277132204, ಚಂದ್ರಶೇಖರ ಭಟ್ 9449366524 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
ಐಕಳ ಪೊಂಪೈ ಕಾಲೇಜು ಎಂ.ಕಾಂ.100%

ಕಿನ್ನಿಗೋಳಿ : ಐಕಳ ಪೊಂಪೈ ಕಾಲೇಜಿನ ಮೊದಲನೇ ಸೆಮಿಸ್ಟರ್ ಮತ್ತು ಮೂರನೇ ಸೆಮಿಸ್ಟರ್ ಎಂ.ಕಾಂ ವಿಭಾಗದ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯ ಕಳೆದ 2018 ನವಂಬರ್ ತಿಂಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ...

Close