ಸಂಸ್ಕಾರಯತ ಶಿಕ್ಷಣವೇ ಉತ್ತಮ

ಕಿನ್ನಿಗೋಳಿ : ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡದೇ ಹೋದಲ್ಲಿ ಭವಿಷ್ಯದಲ್ಲಿ ಹೆತ್ತವರು ಪಶ್ಚಾತ್ತಾಪ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ಮಕ್ಕಳಿಗೆ ಸಂಸ್ಕಾರಯುತ ಧಾರ್ಮಿಕ ಶಿಕ್ಷಣದ ಅತ್ಯಗತ್ಯ ಎಂದು ಪೊಸೋಟ್ ಮಲ್ಹರ್ ವಿದ್ಯಾ ಸಂಸ್ಥೆಯ ಚೇಯರ್ ಮೆನ್ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಅಶ್ಶಹೀರ್ ಅಲ್ ಬುಖಾರಿ ಹೇಳಿದರು.
ಕಿನ್ನಿಗೋಳಿ ಸಮೀಪದ ಕಲ್ಕರೆ ಮಿಸ್ಬಾಹುಲ್ ಮದೀನ ಧಾರ್ಮಿಕ ಸಂಸ್ಥೆಯ ತೃತೀಯ ವಾರ್ಷಿಕ ಸಮಾರಂಭ ಹಾಗೂ ಅಜ್ಮೀರ್ ಮೌಲಿದ್ ಮಜ್ಲಿಸ್ ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮಿಸ್ಬಾಹುಲ್ ಮದೀನಾ ಸಂಸ್ಥೆಯ ಪ್ರಾಂಶುಪಾಲ ಎ.ಪಿ. ಅಬ್ದುಲ್ಲ ಮದನಿ ಕಾರ್ಯಕ್ರಮ ಉದ್ಘಾಟಿಸಿದರು. ಬಶೀರ್ ಮದನಿ ಅಲ್ ಖಾಮಿಲ್ ಕೂಳೂರು ಮುಖ್ಯ ಭಾಷಣಗೈದರು.
ಹಂಝ ಮದನಿ ಜಿ. ಕೆರೆ, ಹಾಫಿಳ್ ಅಬ್ದುಲ್ ಮಜೀದ್ ಫಾಳಿಲಿ ಅಲ್ ಕಾಮಿಲ್, ಇದಿನಬ್ಬ ಹಾಜಿ ಶಾಲೆಮನೆ, ಝೈನುದ್ದೀನ್ ಹಾಜಿ ಪಕ್ಷಿಕೆರೆ, ಎಸ್.ಎಸ್.ಎಫ್ ರಾಜ್ಯ ದಾವಾ ಉಪಾಧ್ಯಕ್ಷ ಅಶ್ರಫ್ ರಝಾ ಅಂಜದಿ, ಎಂ.ಎಸ್. ಅಲಿಯಬ್ಬ ಹಾಜಿ ಕೈಕಂಬ, ಕೆಜೆಎಂ ಶಾಂತಿನಗರ ಖತೀಬರು ಉಮರುಲ್ ಫಾರೂಕ್ ಸಖಾಫಿ, ಕಿನ್ನಿಗೋಳಿ ಜುಮ್ಮಾಮಸೀದಿ ಖತೀಬರು ಅಬ್ದುಲ್ ಲತೀಫ್ ಸಖಾಫಿ, ಅಬ್ದುಲ್ ರಝಾಕ್ ಗೋಳಿಜೋರ, ಶಾಫಿ ಮದನಿ ಕಂದಾವರ, ಎಂಜೆಎಂ ಪುನರೂರು ಖತೀಬರು ಬಶೀರ್ ಮದನಿ, ಬಿಜೆಎಂ ಮಸೀದಿ ಪಕ್ಷಿಕೆರೆ ಖತೀಬರು ಅಬ್ದುಲ್ ಖಾದರ್ ಮದನಿ, ಬದ್ರುಹಾಜಿ ಬಜಪೆ, ಐಜೆಎಂ ಎಸ್.ಕೋಡಿ ಖತೀಬರು ಇಬ್ರಾಹಿಂ ರಝ್ವಿ, ಎಂಜೆಎಂ ಪುನರೂರು ಅಧ್ಯಕ್ಷ ಸಿದ್ದೀಕ್ ಪುನರೂರು, ಕೆಜೆಎಂ ಶಾಂತಿನಗರ ಅಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್, ಎಂಜೆಎಂ ಕಿನ್ನಿಗೋಳಿ ಅಧ್ಯಕ್ಷ ಮುಹಮ್ಮದ್ ರಫೀಕ್ ಫ್ಲವರ್, ಬಿಜೆಎಂ ಪಕ್ಷಿಕೆರೆ ಅಧ್ಯಕ್ಷ ಮುಹಮ್ಮದ್ ನೂರಾನಿಯ್ಯ ಉಪಸ್ಥಿತರಿದ್ದರು.
ಎಸ್.ಎ. ಹಸನ್ ಸಖಾಫಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-04041902

Comments

comments

Comments are closed.