ಪದ್ಮನೂರು ಹೊಲಿಗೆ ತರಬೇತಿ ಕೇಂದ್ರ ಉದ್ಘಾಟನೆ

ಕಿನ್ನಿಗೋಳಿ : ಸಂಸ್ಥೆಗಳು ಸೂಕ್ತ ಮಾರ್ಗದರ್ಶನ ನೀಡಿದಾಗ ಮಹಿಳೆಯರು ಸಂಘಟನಾ ಶಕ್ತಿಯಿಂದ ಸ್ವಾವಲಂಭಿ ಜೀವನ ಸಾಗಿಸಬೇಕು. ಎಂದು ಪದ್ಮನೂರು ಯಕ್ಷಗಾನ ಬಯಲಾಟ ಸಮಿತಿ ಅಧ್ಯಕ್ಷ ಪಿ. ಸತೀಶ್ ರಾವ್ ಹೇಳಿದರು.
ಪದ್ಮನೂರು ಬಯಲಾಟ ಸಮಿತಿಯ ಸಭಾಭವನದಲ್ಲಿ ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು, ಹೆಣ್ಣು ಮಕ್ಕಳ ಹಾಗೂ ಮಹಿಳಾ ಹಕ್ಕುಗಳ ಸಬಲೀಕರಣ ಮತ್ತು ಪ್ರವರ್ತನ ಯೋಜನೆ ಹಾಗೂ ಜ್ಯೋತಿ ಮಹಿಳಾ ಮಂಡಲ ಪದ್ಮನೂರು ಇದರ ಆಶ್ರಯದಲ್ಲಿ ಜೀವನ ಕೌಶಲ್ಯ ಕುರಿತು ಕಾರ್ಯಗಾರ ಮತ್ತು ಹೊಲಿಗೆ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಜೀವನ ಕೌಶಲ್ಯ ತರಬೇತಿ ಕೇಂದ್ರ ಬಿ.ಸಿ. ರೋಡು ಇದರ ನಿರ್ದೇಶಕ ಗೋಪಾಲ ಅಂಚನ್ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಜ್ಯೋತಿ ಮಹಿಳಾ ಮಂಡಲದ ಅಧ್ಯಕ್ಷೆ ಮೆಲಿಟಾ ಅಧ್ಯಕ್ಷತೆ ವಹಿಸಿದ್ದರು. ಸಂಜೀವಿನಿ ಸಂಸ್ಥೆಯ ಭಗಿನಿ ಅಮಿತ, ಸಾಮಾಜಿಕ ಕಾರ್ಯಕರ್ತೆ ನಂದಾ ಪಾಯಸ್ ಉಪಸ್ಥಿತರಿದ್ದರು.
ಸಲಹಾ ಕೇಂದ್ರದ ಯೋಜನಾ ಸಂಯೋಜಕ ವಿಲಿಯಂ ಸ್ಯಾಮುವೆಲ್ ಪ್ರಸ್ತಾವನೆಗೈದರು. ಕಾವ್ಯ ವಂದಿಸಿದರು. ವಲಯ ಸಂಯೋಜಕ ಅಶೋಕ್ ಕಾರ್ಯಕ್ರಮ ನಿರೂಪಿಸಿದರು.

Kinnigoli-04041901

Comments

comments

Comments are closed.

Read previous post:
Kinnigoli-03041902
ಗೋಳಿಜೋರ ಶ್ರೀ ರಾಮ ಯುವಕ ವೃಂದ

ಕಿನ್ನಿಗೋಳಿ : ಸಂಘ ಸಂಸ್ಥೆಗಳು ಗ್ರಾಮದ ಜನರ ಸಮಸ್ಯೆ ಹಾಗೂ ಜನಪರ ಕಾಳಜಿಯುತವಾದ ಸಮಾಜ ಸೇವೆ ಮಾಡಬೇಕು ಎಂದು ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಸಂತೋಷ್‌ಕುಮಾರ್...

Close