ಹಳೆಯಂಗಡಿ : ನದಿಗೆ ಹಾರಿದ ವ್ಯಕ್ತಿಯ ಶವ ಪತ್ತೆ

ಮೂಲ್ಕಿ: ಮೂಲ್ಕಿ ಬಳಿಯ ಹಳೆಯಂಗಡಿ ಪಾವಂಜೆ ಸೇತುವೆಯಿಂದ ಗುರುವಾರ ಹಾರಿದ ವ್ಯಕ್ತಿಯ ಶವವು ಶುಕ್ರವಾರ ನದಿಯಲ್ಲಿ ಪತ್ತೆಯಾಗಿದೆ.
ಸುರತ್ಕಲ್ ಬಳಿಯ ಹೊನ್ನಕಟ್ಟೆಯ ನಿವಾಸಿ ಹರೀಶ್ ಯಾನೆ ಪ್ರಕಾಶ್ ಪೂಜಾರಿ (65)  ಅನಾರೋಗ್ಯದಿಂದ ಬಳಲುತ್ತಿದ್ದು, ಗುರುವಾರ ಸಂಜೆ ಮನೆಯಿಂದ ನೇರವಾಗಿ ರಿಕ್ಷಾದ ಮೂಲಕ ಹಳೆಯಂಗಡಿಗೆ ಆಗಮಿಸಿ, ಪಾವಂಜೆಯ ಸೇತುವೆಯವರೆಗೆ ನಡೆದುಕೊಂಡು ಬಂದು ನಂತರ ನೇರವಾಗಿ ನದಿಗೆ ಹಾರಿದ್ದರು. ಶುಕ್ರವಾರ ಶವವನ್ನು ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯ ಚಂದ್ರಕುಮಾರ್, ಸಾಮಾಜಿಕ ಕಾರ್ಯಕರ್ತರಾದ ಅದ್ದಿ ಬೊಳ್ಳೂರು, ಜಯ ಕೋಟ್ಯಾನ್, ತೇಜ್‌ಪಾಲ್ ಸುವರ್ಣ ಅವರು ದೋಣಿಯ ಸಹಾಯದಿಂದ ಶವವನ್ನು ಮೇಲೆತ್ತಲು ಮೂಲ್ಕಿ ಪೊಲೀಸರಿಗೆ ಸಹಕಾರ ನೀಡಿದರು.
ರಾಕೇಶ್ ನೀಡಿದ ದೂರಿನಂತೆ ಮೂಲ್ಕಿ ಠಾಣೆಯಲ್ಲಿ ಆತ್ಮಹತ್ಯೆಯ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Mulki-05041901 Mulki-05041902

Comments

comments

Comments are closed.