ಮಾನಸಿಕವಾಗಿ ಸಧೃಢರಾಗಲು ಕ್ರೀಡೆ ಅಗತ್ಯ

ಕಿನ್ನಿಗೋಳಿ : ಜೀವನದಲ್ಲಿ ಮಾನಸಿಕವಾಗಿ ಸಧೃಢರಾಗಲು ಕ್ರೀಡೆ ಅಗತ್ಯ. ಎಲ್ಲಾ ವಯೋಮಾನದವರಿಗೂ ಕ್ರೀಡೆ ದೈಹಿಕ ಕ್ಷಮತೆಯನ್ನು ಕೊಡುತ್ತದೆ ಡಾ.ಅರವಿಂದ ಭಟ್ ಹೇಳಿದರು.
ಹಳೆಯಂಗಡಿ ಟಾರ್ಪೋಡೊಸ್ ಸ್ಪೋರ್ಟ್ಸ್ ಕ್ಲಬ್‌ನ ಸಂಯೋಜನೆಯಲ್ಲಿ ವಕೀಲ ವೃತ್ತಿಯಲ್ಲಿನ ಕ್ರೀಡಾಳುಗಳಿಗೆ ನಡೆದ ಜಿಲ್ಲಾ ಮಟ್ಟದ ಶಟಲ್ ಬಾಡ್ಮಿಂಟನ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಉದ್ಯಮಿ ನಾಗಭೂಷಣ್ ರೆಡ್ಡಿ ಶುಭ ಹಾರೈಸಿದರು.
ಸ್ಪರ್ಧೆಯಲ್ಲಿ ಪುರುಷರ ಹಾಗೂ ಮಹಿಳಾ ವಿಭಾಗದಲ್ಲಿ ಮುಕ್ತವಾಗಿ ಸಿಂಗಲ್ಸ್ ಮತ್ತು ಡಬಲ್ಸ್ ಪಂದ್ಯಾಟ ನಡೆಯಿತು. ಬೆಂಗಳೂರು, ಮೈಸೂರು, ಕೊಪ್ಪ, ಶಿವಮೊಗ್ಗ, ಪುತ್ತೂರು, ಹಾಸನ, ಮಂಗಳೂರು, ಉಡುಪಿ, ಕಾರ್ಕಳ ಭಾಗದಿಂದ ಸ್ಪರ್ಧಾಳುಗಳು ಭಾಗವಹಿಸಿದ್ದರು.
ಟಾರ್ಪೋಡೊಸ್ ಸ್ಪೋರ್ಟ್ಸ್ ಕ್ಲಬ್‌ನ ಸ್ಪರ್ಧಾ ಸಹ ಸಂಯೋಜಕ ಗಣೇಶ್ ಕಾಮತ್, ಬಾಡ್ಮಿಂಟನ್ ತರಬೇತುದಾರರಾದ ಸಂತೋಷ್ ಖಾರ್ವಿ, ಸತೀಶ್ ಕೆ.ಪಿ, ಹಾಗೂ ರಾಜೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಟಾರ್ಪೋಡೊಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Kinnigoli-06041902

Comments

comments

Comments are closed.