ಕೆ.ಎಸ್.ರಾವ್ ನಗರ ಯುಗಾದಿ ಉತ್ಸವ

ಮೂಲ್ಕಿ:  ಕೆ.ಎಸ್.ರಾವ್ ನಗರದ ಲಿಂಗಪ್ಪಯ್ಯನ ಕಾಡಿನ ವೀರ ಕೇಸರಿ ತರುಣ ವೃಂದದ 9ನೇ ವರ್ಷದ ಯುಗಾದಿ ಉತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಮಹೋತ್ಸವದ ಧಾಮಿಕ ಸಭಾ ಕಾರ್ಯಕ್ರಮ ಭಾನುವಾರ ರಾತ್ರಿ ನಡೆಯಿತು.
ದಿಕ್ಸೂಚಿ ಭಾಷಣ ಮಾಡಿದ ಯುವ ವಾಘ್ಮಿ ಚೈತ್ರಾ ಕುಂದಾಪುರ ಮಾತನಾಡಿ, ಬ್ರಿಟೀಷರು ಭಾರತದಲ್ಲಿ ತಮ್ಮ ವ್ಯಾಪಾರ ಅಭಿವೃದ್ಧಿಗಾಗಿ ಮಕಾಲೆ ಶಿಕ್ಷಣ ಪದ್ದತಿ ಆರಂಭಿಸಿದರು. ನಮ್ಮ ಸನಾತನ ಪದ್ದತಿಯನ್ನು ಪೊಳ್ಳು ಎಂದು ಬಿಂಬಿಸುವ ಮೂಲಕ ಅವರ ವ್ಯಾಪಾರ ವಹಿವಾಟುಗಳನ್ನು ಉನ್ನತೀಕರಣಕ್ಕಾಗಿ ಪಾಶ್ಯಾತ್ಯ ಸಂಸ್ಕೃತಿಯನ್ನು ಆಧುನೀಕರಣ ವೆಂದರು. ನಮ್ಮ ಯವ ಪೀಳಿಗೆ ಈ ಸಂಸ್ಕೃತಿಯನ್ನು ಆಧರಿಸಿಕೊಂಡು ಬಲಹೀನ ಗೊಳ್ಳುವ ಸ್ಥಿತಿ ಉಂಟಾಯಿತು. ನಮ್ಮ ಸನಾತನ ಸಂಸ್ಕೃತಿಯಲ್ಲಿ ಅಡಕವಾಗಿರುವ ವೈಜ್ಞಾನಿಕ ತತ್ವಗಳನ್ನು ಯುವ ಜನತೆಗೆ ತಿಳಿಸಬೇಕು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ದಾರ್ಶನಿಕರ ಬಗ್ಗೆ ವಿದ್ಯಾರ್ಥಿ ದೆಸೆಯಲ್ಲಿಯೇ ತಿಳುವಳಿಕೆ ಹೊಂದಬೇಕು ನಮ್ಮ ಯುವ ಪೀಳಿಗೆಗೆ ಸ್ವಾಮಿ ವಿವೇಕಾನಂದರು ಮಾದರಿಯಾಗಬೇಕೇ ವಿನಹ ಯಾವುದೇ ಸಿನೆಮಾ ತಾರೆಗಳಲ್ಲ ಈ ಬಗ್ಗೆ ಸಮಾಜ ಸಂಘಟಕರು ಯುವ ಜನತೆಗೆ ಉತ್ತಮ ಮಾರ್ಗದರ್ಶಿಗಳಾಗಬೇಕು ಈ ನಿಟ್ಟಿನಲ್ಲಿ ಯುಗಾದಿ ಆಚರಣೆ ಸ್ತುತ್ಯರ್ಹ ಎಂದರು. ಮೂಡಬಿದ್ರೆ ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರಸ್ತಾವಿಸಿದ ಶಿಕ್ಷಕ ವೀರಬದ್ರಯ್ಯ ಹಿರೇಮಠ ಮಾತನಾಡಿ, ಮಕ್ಕಳಲ್ಲಿ ರಾಷ್ಟ್ರ ಭಕ್ತಿ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳುವಳಿಕೆಯೊಂದಿಗೆ ನಮ್ಮ ಸಂಸ್ಕೃತಿ ಸಂಸ್ಕಾರಗಳ ತಿಳುವಳಿಕೆಯೊಂದಿಗೆ ನಮ್ಮ ಹಬ್ಬಗಳನ್ನು ಸಾವತ್ರಿಕವಾಗಿ ಆಚರಿಸುವ ಮೂಲಕ ವೀರಕೇಸರಿ ತರುಣ ವೃಂದವು ಕಾರ್ಯ ವೆಸಗುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ ವಹಿಸಿದ್ದರು.
ಅತಿಥಿಗಳಾಗಿ ಹಿಂದೂ ಜನಜಾಗ್ರತಿ ಸಮಿತಿಯ ಜಿಲ್ಲಾ ಸಮನ್ವಯಕರಾದ ಚಂದ್ರ ಮೊಗೇರ್,ನಿವೃತ್ತ ಸೈನಿಕ ಪ್ರಶಾಂತ್ ಕೆಎಸ್‌ರಾವ್ ನಗರ, ವೀರಕೇಸರಿ ತರುಣ ವೃಂದದ ಅಧ್ಯಕ್ಷ ಪ್ರಶಾಂತ ಕೆ. ಅತಿಥಿಗಳಾಗಿದ್ದರು.
ಪ್ರಶಾಂತ್ ಕೆ.ಸ್ವಾಗತಿಸಿದರು. ವೀರಬದ್ರಯ್ಯ ಹಿರೇಮಠ ನಿರೂಪಿಸಿದರು.

Mulki-08041901

Comments

comments

Comments are closed.

Read previous post:
Mulki-08041901
ಮತಯಾಚನೆ-ಸಂಪರ್ಕ ಅಭಿಯಾನ

ಮೂಲ್ಕಿ: ಮೂಡಬಿದ್ರಿ ಕ್ಷೇತ್ರದ ಕಟೀಲು ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ದೇಲಂತಬೆಟ್ಟು ಗ್ರಾಮದ ಶಿಬರೂರಿನಲ್ಲಿ ಲೋಕಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿಯಾದ ನಳಿನ್ ಕುಮಾರ್ ಕಟೀಲ್ ರವರ ಪರವಾಗಿ ಎರಡನೇ ಸುತ್ತಿನ...

Close