ಭವಾನಿಶಂಕರ್ ಕೆ ಶೆಟ್ಟಿ

ಕಿನ್ನಿಗೋಳಿ: ಮುಂಬಯಿಯ ಧಾರ್ಮಿಕ ಕ್ಷೇತ್ರದ ಪ್ರಸಿದ್ದ ಮುಂದಾಳು, ಬೈಂಗನ್‌ವಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಸ್ಥಾಪಕ ಪಣಂಬೂರು ಮೂಲದ ಭವಾನಿಶಂಕರ್ ಕೆ ಶೆಟ್ಟಿ (65) ಅಲ್ಪ ಕಾಲದ ಅನಾರೋಗ್ಯದಿಂದ ಮುಂಬಯಿಯಲ್ಲಿ ಸೋಮವಾರ ನಿಧನರಾದರು. ಅವರು ಸುಮಾರು ೪೦ ವರ್ಷದ ಹಿಂದೆ ಬೈಂಗನ್‌ವಾಡಿಯಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸ್ಥಾಪಿಸಿದ್ದರು. ಅವರು ಪ್ರತಿವರ್ಷ ದೇವಸ್ಥಾನದ ಜಾತ್ರೆಯ ನೇಮೋತ್ಸವ ಸಂದರ್ಭ ಊರಿನಿಂದ ಜಾನಪದ ಕಲಾವಿದರನ್ನು ಮುಂಬಯಿಗೆ ಕರೆಸಿ ಗೌರವಿಸುವ ಮೂಲಕ ಕಲಾ ಪ್ರೋತ್ಸಾಹಕರಾಗಿದ್ದರು. ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಅವರಿಗೆ ಎನ್‌ಐಟಿಕೆಯ ದಾಮೋದರ ಕೆ. ಶೆಟ್ಟಿ ಸೇರಿ ಮೂವರು ಸಹೋದರರು, ಮೂವರು ಸಹೋದರಿಯರು ಇದ್ದಾರೆ. ಅಂತಿಮ ಸಂಸ್ಕಾರ ಮೃತರ ಹುಟ್ಟೂರು ಕಿಲೆಂಜೂರು ಮಾಡರಮನೆಯಲ್ಲಿ ನಡೆಯಲಿದೆ.

Kinnigoli-09041901

Comments

comments

Comments are closed.

Read previous post:
Kinnigoli-07041904
ಮಿಥುನ ರೈ ಪರವಾಗಿ ಮತಯಾಚನೆ

ಕಿನ್ನಿಗೋಳಿ : ಮೆನ್ನಬೇಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಲ್ಲಂಜೆ ಪರಿಸರದಲ್ಲಿ ಮಿಥುನ ರೈ ಪರವಾಗಿ ಮತಯಾಚನೆ ಮಾಡಲಾಯಿತು ಈ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಶಾಸಕ ಅಭಯಚಂದ್ರ ಜೈನ್,...

Close