ಕಾಂಗ್ರೇಸ್ ಸಮರ್ಥ ಆಡಳಿತ ನೀಡಬಲ್ಲದು

ಕಿನ್ನಿಗೋಳಿ : ಹಿಂದಿನ ಸಿದ್ದರಾಮಯ್ಯ ಸರಕಾರ ಹಾಗೂ ಈಗ ಅಸ್ತಿತ್ವದಲ್ಲಿರುವ ಮೈತ್ರಿ ಕೂಟ ಬಡಜನರ ಏಳಿಗೆಗಾಗಿ ಇರುವ ಹಾಗೂ ರೈತ ಪರ ಜನಪರ ಕಾಳಜಿಯೊಮದಿಗೆ ಸಮರ್ಥ ಆಡಳಿತ ನೀಡುತ್ತಿದೆ. ಈ ಬಾರಿ ಕಾಂಗ್ರೆಸ್ ಪಕ್ಷದ ಯುವ ಅಭ್ಯರ್ಥಿ ಮಿಥುನ್ ರೈ ಅವರನ್ನು ಗೆಲ್ಲಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಗುರುರಾಜ ಪೂಜಾರಿ ತೋಕೂರು ಹೇಳಿದರು.
ಕಿನ್ನಿಗೋಳಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾಂಗ್ರೇಸ್ ಸಂಸದರಾಗಿದ್ದ ಜನಾರ್ದನ ಪೂಜಾರಿ, ಆಸ್ಕರ್ ಫೆರ್ನಾಂಡಿಸ್ ಮತ್ತಿತರರ ಕಾಂಗ್ರೇಸ್ ಸಂಸದರು ಶೈಕ್ಷಣಿಕ ಕ್ಷೇತ್ರ, ವಿಮಾನ ನಿಲ್ದಾಣ, ರೈಲು ಯೋಜನೆಗಳನ್ನು ತಂದು ಜಿಲ್ಲೆಯ ಅಭಿವೃದ್ದಿಯಲ್ಲಿ ಕೈ ಜೋಡಿಸಿದ್ದಾರೆ. ಕಳೆದ ೨೫ ವರ್ಷದಿಂದ ದ.ಕ. ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಸಂಸದರು ಇಲ್ಲದೆ ಯಾವುದೇ ಉತ್ತಮ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂದರು.
ಕಾರ್ಯದರ್ಶಿ ಗೋಪಿನಾಥ ಪಡಂಗ ಮಾತನಾಡಿ ಕೇಂದ್ರದ ಬಿಜೆಪಿ ಸರಕಾರ ಬಡವರ ಬಗ್ಗೆ ಕಾಳಜಿ ಇರದೆ ಶ್ರೀಮಂತರನ್ನು ಒಲೈಸುತ್ತಿದೆ. ಅವಿಭಜಿತ ದ.ಕ. ಉಡುಪಿ ಜಿಲ್ಲೆಯ ರಾಷ್ಟ್ರಿಯ ಹೆದ್ದಾರಿಯ ಅಸಮರ್ಪಕ ಕಾಮಗಾರಿ ಹಾಗೂ ಹತ್ತಿರದಲ್ಲೆ ಎರಡು ಟೋಲ್ ಗೇಟ್‌ಗಳನ್ನು ಅಳವಡಿಸಿ ಜನರನ್ನು ವಂಚಿಸುತ್ತಿದೆ. ಕಾಂಗ್ರೇಸ್ ಪಕ್ಷದ ಸಮರ್ಥ ಅಭ್ಯರ್ಥಿ ಮಿಥುನ್‌ರೈ ಅವರ ಬಗ್ಗೆ ಬಿಜೆಪಿ ಅಪಪ್ರಚಾರದ ರಾಜಕೀಯ ಮಾಡುತ್ತಿದೆ ಇದು ಸಲ್ಲದು. ಜನರು ಯುವ ನೇತಾರ ಮಿಥುನ್ ರೈ ಅವರಿಗೆ ಮತ ನೀಡಿ ಅವರನ್ನು ಬಹುಮತದಿಂದ ಗೆಲ್ಲಿಸಬೇಕು ಎಂದು ಹೇಳಿದರು.
ಕಾಂಗ್ರೇಸ್ ಮುಖಂಡರಾದ ಮಯ್ಯದ್ದಿ ಪಕ್ಷಿಕೆರೆ, ರಮೇಶ್ ಪಕ್ಷಿಕೆರೆ, ಜಾಕ್ಷನ್ ಪಕ್ಷಿಕೆರೆ, ಮಹಾಬಲ ಸನಿಲ್ ಕೆ. ಎಸ್‌ರಾವ್ ನಗರ, ಪ್ರವೀಣ್ ಸುವರ್ಣ, ನಿಶಾಮ್ ಪಾಯಸ್, ನಿಶಾಂತ್ ಪಕ್ಷಿಕರೆ ಮತ್ತಿತತರು ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli-10040901
ಹಯಗ್ರೀವ ಉಪಾಧ್ಯಾಯ

ಕಿನ್ನಿಗೋಳಿ : ಕಿನ್ನಿಗೋಳಿ ಬಟ್ಟಕೋಡಿ ನಿವಾಸಿ ಪುರೋಹಿತ ಹಯಗ್ರೀವ ಉಪಾಧ್ಯಯ (75 ವರ್ಷ) ಅವರು ಸೋಮವಾರ ಅಸೌಖ್ಯದಿಂದ ನಿಧನ ಹೊಂದಿದ್ದಾರೆ. ಮೃತರಿಗೆ ಪತ್ನಿ, ನಾಲ್ವರು ಪುತ್ರಿಯರು ಇದ್ದಾರೆ. ಮೃತರು...

Close