ಕಿನ್ನಿಗೋಳಿ ಬಿಜೆಪಿ ರೋಡ್ ಶೋ

ಕಿನ್ನಿಗೋಳಿ : ಕಿನ್ನಿಗೋಳಿ ಕಟೀಲು ಹಳೆಯಂಗಡಿ ಹಾಗೂ ಮೂಲ್ಕಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಕಿನ್ನಿಗೋಳಿ ಪೇಟೆಯಲ್ಲಿ ಬುಧವಾರ ರೋಡ್ ಶೋ ಮೂಲಕ ದ.ಕ ಲೋಕಸಭಾ ಅಭ್ಯರ್ಥಿ ನಳಿನ್‌ಕುಮಾರ್ ಕಟೀಲ್ ಮತಯಾಚಿಸಿದರು.
ನಳಿನ್ ಕುಮಾರ್ ಮಾತನಾಡಿ ಬಿಜೆಪಿ ಅಲೆ ಮೋದಿ ಅಲೆ ಜೋರಾಗಿ ಕೇಳಿ ಬರುತ್ತಿದೆ. ಹಳ್ಳಿ ಹಳ್ಳಿಗಳಲ್ಲಿಯೂ ಜನರು ಬಿಜೆಪಿ ಪರ ಆಶೀರ್ವದಿಸಲು ತಯಾರಾಗಿದ್ದಾರೆ. 2 ಲಕ್ಷ ಮತಗಳ ಅಂತರದಿಂದ ಗೆದ್ದು ಬರುವ ಭರವಸೆ ನಮಗಿದೆ. ಈ ಸಲ ಮೂಲ್ಕಿ ಮೂಡಬಿದಿರೆ ಕ್ಷೇತ್ರದಲ್ಲಿ ಸುಮಾರು 40000ಕ್ಕಿಂತ ಹೆಚ್ಚು ಮತಗಳ ಅಂತರ ದೊರಕಲಿದೆ. ದೇಶದಲ್ಲಿ 350 ಸ್ಥಾನಗಳನ್ನು ಬಿಜೆಪಿ ಮಿತ್ರ ಕೂಟ ಗೆಲ್ಲಲಿದೆ ಎಂದರು.
.ಈ ಸಂದರ್ಭ ಮುಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಮಂಡಲಾಧ್ಯಕ್ಷ ಈಶ್ವರ್ ಕಟೀಲ್, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Kinnigoli-11041904

Comments

comments

Comments are closed.