ಬಳ್ಕುಂಜೆ ಆಟೋ ವಾರ್ಷಿಕೋತ್ಸವ

ಕಿನ್ನಿಗೋಳಿ : ನಾವೀಗ ಯಾಂತ್ರಿಕೃತ ಜೀವನ ಮತ್ತು ಅರ್ಥಹೀನ ಪ್ರಪಂಚದಲ್ಲಿ ಬದುಕುತ್ತಿದ್ದೇವೆ. ಆಧ್ಯಾತ್ಮ ಮತ್ತು ವಿಜ್ಞಾನದ ಅವಿಷ್ಕಾರಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ಸಿಗುವಂತಾಗಬೇಕು. ದಾನ ಧರ್ಮದಲ್ಲಿ ನೈಜತೆ ಇರಲಿ. ಉತ್ತಮ, ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಸಂಘಟನೆಯನ್ನು ಬಲಪಡಿಸುವುದರ ಜೊತೆಗೆ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮಾದರಿ ಸಂಸ್ಥೆಯಾಗಿ ಮಾಡಬೇಕು ಎಂದು ಕೇಮಾರು ಸಾಂದೀಪನಿ ಮಠದ ಈಶ ವಿಠಲದಾಸಸ್ವಾಮಿ ಹೇಳಿದರು.
ಬಳ್ಕುಂಜೆ ವಿಠೋಭ ರುಖುಮ್ಮಾಯಿ ಮಂದಿರದ ಮುಂಭಾಗದಲ್ಲಿ ನಡೆದ ಬಳ್ಕುಂಜೆ ಆಟೋ ರಿಕ್ಷಾ ಮಾಲಕರ ಸಂಘದ ವಾರ್ಷಿಕೋತ್ಸವ ಸಮಾರಂಭ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಬಳ್ಕುಂಜೆ ಧರ್ಮಗುರು ಮೈಕಲ್ ಡಿಸಿಲ್ವ, ವಿರಾರ್ ಶಂಕರ್ ಬಿ ಶೆಟ್ಟಿ, ಕೇಶವ ನಾಗಣ್ಣ ಶೆಟ್ಟಿ, ಹಿರಿಯ ಆಟೋ ಚಾಲಕರಾದ ಇಸ್ಮಾಯಿಲ್, ಕು. ಕ್ರಿಸ್ಲಿನ್ ಡಿ ಸೋಜ ಅವರನ್ನು ಸನ್ಮಾನಿಸಲಾಯಿತು.
ಬಳ್ಕುಂಜೆ ಬಂಡಸಾಲೆ ದಯಾಶಂಕರ್ ಕೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಬಳ್ಕುಂಜೆ ಹಯಾತುಲ್ ಇಸ್ಲಾಮ್ ಮದ್ರಸ ಧರ್ಮಗುರು ಹಾಜಿ ಮೊಹಮದ್ ನಜೀರ್ ಸಖಾಪಿ, ಯುಗಪುರುಷ ಪ್ರಧಾನ ಸಂಪಾದಕ ಕೆ.ಭುವನಾಭಿರಾಮ ಉಡುಪ, ಮೂಲ್ಕಿ ವಿಜಯಾ ರೈತ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಉದ್ಯಮಿ ನೆಲ್ಸನ್ ಲೋಬೋ, ದೇವಿಪ್ರಸಾದ್ ಇಸ್ಮಾಯಿಲ್, ಕಿನ್ನಿಗೋಳಿ ಆಟೋ ರಿಕ್ಷಾ ಚಾಲಕರ ಸಂಘದ ಶಶಿಕಾಂತ್ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-11041908

Comments

comments

Comments are closed.

Read previous post:
Kinnigoli-11041905
ಸಸಿಹಿತ್ಲು ಬೀಚ್

ಕಿನ್ನಿಗೋಳಿ : ಹಳೆಯಂಗಡಿ ಬಳಿಯ ಸಸಿಹಿತ್ಲು ಮುಂಡಾ ಬೀಚ್‌ನಲ್ಲಿ ತೀವ್ರ ನದಿ ಕಡಲು ಕೊರೆತದಿಂದ ಹಳೆಯಂಗಡಿ ಗ್ರಾಮ ಪಂಚಾಯಿತಿ ನಿರ್ಮಿಸಿದ ಅಂಗಡಿ ಕೋಣೆ ಸಂಪೂರ್ಣವಾಗಿ ನೆಲಸಮಗೊಂಡಿದೆ. ಅಂಗಡಿ ಕೋಣೆಯ...

Close