ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠ ವಾರ್ಷಿಕೋತ್ಸವ

ಮೂಲ್ಕಿ : ಶಿಕ್ಷಣವು ಕದಿಯಲಾಗದ ಅಮೂಲ್ಯ ವಸ್ತುವಾಗಿ ವಿದ್ಯಾದಾನದ ಮೂಲಕ ಹಂಚಿದಷ್ಟು ಹೆಚ್ಚಿಗೆ ಬೆಳೆಯುವ ವಸ್ತು.ಈ ಕಾರಣಗಳಿಂದ ಶೈಕ್ಷಣಿಕ ದಾನವು ಬಹಳ ಉತ್ತಮ ದಾನವಾಗಿದೆ ಎಂದು ಶಿರಾಲಿ ಶ್ರೀ ಮಹಾಮಾಯ ಮಹಾಗಣಪತಿ ದೇವಸ್ಥಾನದ ಅರ್ಚಕ ವಿದ್ವಾನ್ ಶಾಂತಕೃಷ್ಣ ಪದ್ಮನಾಭ ಭಟ್ ಹೇಳಿದರು.
ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಸಂಭದಿಸಿದ ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠ ಸಂಸ್ಕೃತ ವೇದ ಪಾಠ ಶಾಲೆಯ ವಾರ್ಷಿಕೋತ್ಸವದ ಮುಖ್ಯ ಅಭ್ಯಾಗತರಾಗಿ ಅವರು ಮಾತನಾಡಿದರು.
ಸಂಸ್ಥೆಯ ಮಹಾಪೋಷಕರಾದ ವಿಶ್ವನಾಥ ಶೆಣೈ ಮುಂಬೈ ಮಾತನಾಡಿ, ಭಾರತೀಯ ಸಂಸ್ಕೃತಿಗೆ ಇಂದು ವಿಶ್ವ ಮಾನ್ಯತೆ ಲಭಿಸುತ್ತಿದೆ. ಭಾರತದ ಕೊಡುಗೆಯಾದ ದೇವನಾಗರಿ ಲಿಪಿಯ ಸಂಸ್ಕೃತವನ್ನು ಕಲಿಯಲು ವಿದೇಶಿಯರು ಹಾತೊರೆಯುತ್ತಿದ್ದರೂ ನಮ್ಮಲ್ಲಿ ಮೂಲೆ ಗುಂಪಾಗುತ್ತಿದೆ. ಈ ಬಗ್ಗೆ ಪೋಷಕರು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠದ ಅಧ್ಯಕ್ಷ ಕೆ.ನಾರಾಯಣ ಶೆಣೈ ಮಾತನಾಡಿ, ವಿದ್ಯಾ ಸಂಸ್ಥೆಯು ಉತ್ತಮ ಗುಣಮಟ್ಟದ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾದಾನ ನೀಡುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ಉತ್ತಮ ಪ್ರತಿಭಾ ಸಂಪನ್ನರಾಗಿ ಸಮಾಜದ ಸೇವೆ ಮಾಡುತ್ತಿರುವುದು ಸಂತಸ ತಂದಿದೆ.ಎಂದ ಅವರು ಶಾಲೆಯ ಬೆಳವಣಿಗೆ ಹಾಗೂ ದಾನಿಗಳ ಸಹಕಾರ ಸ್ಮರಿಸಿದರು.
ಅತಿಥಗಳಾಗಿ ದೇವಸ್ಥಾನದ ಟ್ರಷ್ಟಿಗಳಾದ ಯು ವಸಂತ ಶೆಣೈ, ದಾಮೋದರ ಕುಡ್ವಾ, ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠದ ಉಪಾಧ್ಯಕ್ಷ ಬಾಬುರಾಯ ಶೆಣೈ, ಕಾರ್ಯದರ್ಶಿ ಎಚ್.ರಾಮದಾಸ ಕಾಮತ್, ವೇದಪಾಠ ಶಾಲೆಯ ಪ್ರಭಂದಕ ಕಮಲಾಕ್ಷ ಶೆಣೈ,ಕರ್ಮಾಂಗ ಅದ್ಯಾಪಕ ನವೀನ್ ಭಟ್,ಸಂಸ್ಕೃತ ಅಧ್ಯಾಪಕ ವಿದ್ವಾನ್ ಶಶಾಂಕ್ ಭಟ್ ಬಳಂಜ ವೇದಿಕೆಯಲ್ಲಿದ್ದರು.
ನವನೀತ ಶರ್ಮ ಸ್ವಾಗತಿಸಿದರು. ಬಾಬುರಾಯ ಶೆಣೈ ವರದಿ ಮಂಡಿಸಿದರು,ಕೃಷ್ಣ ಪ್ರಸಾದ್ ಶರ್ಮ ನಿರೂಪಿಸಿದರು, ಎಚ್.ರಾಮದಾಸ ಕಾಮತ್ ವಂದಿಸಿದರು. ಬಳಿಕ ವೇದ ಪಾಠ ಶಾಲೆಯ ವಿದ್ಯಾರ್ಥಿಗಳಿಂದ ಮಧ್ಯಮ ವ್ಯಾಯೋಗಃ ಎಂಬ ಸಂಸ್ಕೃತ ನಾಟಕ ನಡೆಯಿತು.

Mulki-13041901

 

Comments

comments

Comments are closed.

Read previous post:
2
ತಾ.14-21 : ಕಟೀಲು ಜಾತ್ರೆ

ಕಟೀಲು : ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ತಾ. 14ರಿಂದ 21ರವರೆಗೆ ವರ್ಷಾವಧಿ ಉತ್ಸವ ನಡೆಯಲಿದೆ.

Close