ಸೈಂಟ್ ಆನ್ಸ್ ಇನ್ಸಿಟ್ಯೂಟ್ ಆಫ್ ನಸಿಂಗ್

ಮೂಲ್ಕಿ : ನರ್ಸಿಂಗ್ ವೃತ್ತಿಯು ಅತ್ಯುತ್ತಮ ಸೇವೆಯಾಗಿದ್ದು ಜನರ ಆರೋಗ್ಯ ವೃದ್ಧಿಸುವ ಸೇವೆಯನ್ನು ಆಯ್ದುಕೊಂಡಿರುವ ವಿದ್ಯಾರ್ಥಿಗಳು ಅಭಿನಂದನೀಯರು ಎಂದು ಮೂಡಬಿದ್ರೆ ಆಳ್ವಾಸ್ ಇನ್ಸಿಟ್ಯೂಟ್ ಆಫ್ ನರ್ಸಿಂಗ್ ಪ್ರಾಂಶುಪಾಲೆ ಶೈಲಾ ಮಾರಿಯಾ ಡಿಸೋಜಾ ಹೇಳಿದರು.
ಮೂಲ್ಕಿ ಸೈಂಟ್ ಆನ್ಸ್ ಇನ್ಸಿಟ್ಯೂಟ್ ಆಫ್ ನಸಿಂಗ್ ಸಾಯನ್ಸ್ ವಿದ್ಯಾರ್ಥಿಗಳ ದೀಪ ಪ್ರಜ್ವಲನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ನರ್ಸಿಂಗ್ ಸೇವೆಯು ಹುಟ್ಟ್ಟಿ ನಿಂದ ಸಾವಿನ ವರೆಗೆ ವಿವಿಧ ಹಂತದ ಮಾನವನ ಜೀವನದಲ್ಲಿ ಬರುವ ರೋಗ ರುಜಿನಗಳ ರಕ್ಷಣೆಗಾಗಿ ಅಗತ್ಯವಿದೆ ಇಂದಿನ ಆಧುನಿಕ ಜೀವನ ಪದ್ದತಿಯಲ್ಲಿ ರೋಗಗಳು ಹೆಚ್ಚಾಗುತ್ತಿರುವ ಕಾರಣ ನರ್ಸಿಂಗ್ ಶಿಕ್ಷಣಕ್ಕೆ ಬೇಡಿಕೆಯೂ ಹೆಚ್ಚಾಗಿದೆ. ನಗುಮೊಗದ ಸೇವೆಯ ಮೂಲಕ ರೋಗಿಗಳಲ್ಲಿ ಜೀವನ ಭರವಸೆ ಮೂಡಿಸುವ ನರ್ಸಿಂಗ್ ದಾದಿಗಳ ಸೇವೆ ಅತ್ಯಮೂಲ್ಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೂಲ್ಕಿ ಸೈಂಟ್ ಆನ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಎರಿಕ್ ಸಿ.ಲೋಬೋ ಮಾತನಾಡಿ, ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಸಂಸ್ಥೆಯ ವಿದ್ಯಾರ್ಥಿಗಳು ಶೈಕ್ಷಣಿಕ ಸಮಯದಲ್ಲಿ ಮಾತ್ರವಲ್ಲದೆ ಉಳಿದ ಸಂದರ್ಭದಲ್ಲಿಯೂ ಶಿಸ್ತಿಗೆ ಪ್ರಮುಖ ಆದ್ಯತೆ ನೀಡಬೇಕು ಉತ್ತಮ ಗುಣ ಮಟ್ಟದ ಸೇವೆ ನೀಡಲು ಏಕಾಗ್ರತೆಯ ಕಲಿಕೆ ಬಹಳ ಅಗತ್ಯವಿದೆ ಎಂದರು.
ಈ ಸಂದರ್ಭ ಅತಿಥಿಗಳಾಗಿ ಕಾಲೇಜು ಪ್ರಾಂಶುಪಾಲೆ ಪ್ರೊ. ಹೆಲೆನ್ ಕ್ಲಾರೆಟ್ ಡಿಸೋಜ, ಆಡಳಿತಾಧಿಕಾರಿ ವಂ.ಭಗಿನಿ ಜೋಸ್ ಮೇರಿ.ಉಪನ್ಯಾಸಕರಾದ ಶೃದ್ಧಾ ಕಾಂಚನ್ ,ಪ್ರತಿಮಾ ಶೇರಿಗಾರ್ ಉಪಸ್ಥಿತರಿದ್ದರು.
ಪ್ರೊ. ಹೆಲೆನ್ ಕ್ಲಾರೆಟ್ ಡಿಸೋಜ ಸ್ವಾಗತಿಸಿದರು,ಪ್ರತಿಮಾ ಶೇರಿಗಾರ್ ಪ್ರಸ್ತಾವಿಸಿದರು. ವಂ.ಭಗಿನಿ ಜೋಸ್ ಮೇರಿ ಪ್ರಮಾಣವಚನ ಭೋಧಿಸಿದರು. ರಿಯೋನ್ ನಿರೂಪಿಸಿದರು.ಶೃದ್ದಾ ಕಾಂಚನ್ ವಂದಿಸಿದರು.

Mulki-13041902

Comments

comments

Comments are closed.

Read previous post:
Mulki-13041901
ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠ ವಾರ್ಷಿಕೋತ್ಸವ

ಮೂಲ್ಕಿ : ಶಿಕ್ಷಣವು ಕದಿಯಲಾಗದ ಅಮೂಲ್ಯ ವಸ್ತುವಾಗಿ ವಿದ್ಯಾದಾನದ ಮೂಲಕ ಹಂಚಿದಷ್ಟು ಹೆಚ್ಚಿಗೆ ಬೆಳೆಯುವ ವಸ್ತು.ಈ ಕಾರಣಗಳಿಂದ ಶೈಕ್ಷಣಿಕ ದಾನವು ಬಹಳ ಉತ್ತಮ ದಾನವಾಗಿದೆ ಎಂದು ಶಿರಾಲಿ ಶ್ರೀ...

Close