ಐಕಳ ಕಂಬಳ ಫಲಿತಾಂಶ

ಕಿನ್ನಿಗೋಳಿ : ಕರಾವಳಿಯ ಕೃಷಿ ಹಾಗೂ ಕಂಬಳಕ್ಕೆ ಅವಿನಾಭಾವ ಸಂಬಂಧವಿದೆ. ಗ್ರಾಮೀಣ ಭಾಗದ ಜನರಲ್ಲಿ ಕಂಬಳ ಹಾಸುಹೊಕ್ಕಾಗಿ ಅದರಲ್ಲೂ ಧಾರ್ಮಿಕ ನೆಲೆ ಕಂಡುಕೊಂಡಿದ್ದಾರೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಹಕಾರಿ ರತ್ನ ಡಾ. ಎಂ. ಎನ್. ರಾಜೇಂದ್ರಕುಮಾರ್ ಹೇಳಿದರು.
ಶನಿವಾರ ನಡೆದ ಐಕಳ ಬಾವ ಕಾಂತಬಾರೆ -ಬೂದಾಬಾರೆ ಜೊಡುಕರೆ ಕಂಬಳ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಸಂದರ್ಭ ಸಾಧಕರಾದ ಅದಾನಿ ಪವರ್ ಕಾರ್ಪೋರೇಷನ್ ಆಡಳಿತ ನಿರ್ದೇಶಕ ಕಿಶೋರ್ ಆಳ್ವ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಯಿರಾಧ ಗ್ರೂಫ್ ಆಫ್ ಕಂಪೆನೀಸ್ ಆಡಳಿತ ನಿರ್ದೇಶಕ ಮನೋಹರ್ ಎಸ್. ಶೆಟ್ಟಿ, ಐಕಳ ಕಂಬಳ ಸಮಿತಿ ಅಧ್ಯಕ್ಷ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಅವರನ್ನು ಸನ್ಮಾನಿಸಲಾಯಿತು.  ಈ ಸಂದರ್ಭ ಸಾಧಕ ಹಾಗೂ ದಾನಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಐಕಳ ಬಾವ ಯಜಮಾನರಾದ ದೋಗಣ್ಣ ಶೆಟ್ಟಿ, ವಿಧಾನ ಪರಿಷತ್ ಸಂಸದೀಯ ಕಾರ್ಯದರ್ಶಿ ಐವಾನ್ ಡಿಸೋಜ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧಯಕ್ಷ ಐಕಳ ಹರೀಶ್ ಶೆಟ್ಟಿ, ಉದ್ಯಮಿಗಳಾದ ಅಶೋಕ್ ಅಡ್ಯಂತಾಯ, ಅಶೋಕ್ ಎನ್ ಶೆಟ್ಟಿ, ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ, ಉಡುಪಿ ವಕ್ಛ್ ಬೋರ್ಡ್ ಉಪಾಧ್ಯಕ್ಷ ಹಾಜಿ ಗುಲಾಂ ಮೊಹಮ್ಮದ್, ರಮೇಶ ಶೆಟ್ಟಿ ಗೋಪಾಲಕೃಷ್ಣ ಭಟ್, ಚಲನಚಿತ್ರ ನಟಿ ಐಶ್ವರ್ಯ ಆಚಾರ್ಯ, ಕಂಬಳ ಸಮಿತಿ ಕಾರ್ಯಾಧ್ಯಕ್ಷ ಚಿತ್ತರಂಜನ್ ಭಂಡಾರಿ, ಸಂಚಾಲಕ ಐಕಳ ಮುರಳೀಧರ ಶೆಟ್ಟಿ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೃಷ್ಣ ಮಾರ್ಲ, ಯೋಗೀಶ್ ರಾವ್, ಸಂಜೀವ ಶೆಟ್ಟಿ ಸ್ಥಳಂತಗುತ್ತು, ಲೀಲಾಧರ ಶೆಟ್ಟಿ ಐಕಳ, ಮುಂಬೈ ಸಮಿತಿಯ ಕುಶಲ್ ಭಂಡಾರಿ ಐಕಳ ಬಾವ, ಗಣನಾಥ ಜೆ ಶೆಟ್ಟಿ ಐಕಳ ಬಾವ, ತಿಲಕ್ ರಾಜ್ ಬಲ್ಲಾಳ್ ಐಕಳ ಬಾವ, ಪುರಂದರ ಶೆಟ್ಟಿ ಐಕಳಬಾವ, ವೇಣುಗೋಪಾಲ ಶೆಟ್ಟಿ ಐಕಳ ಬಾವ, ಸ್ವರಾಜ್ ಶೆಟ್ಟಿ, ಐಕಳಬಾವ ಜಯಪಾಲ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಐಕಳ ಕಂಬಳ ಸಮಿತಿ ಅಧ್ಯಕ್ಷ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿದರು, ಶ್ರೀಶ ಸರಾಫ್ ಕಾರ್ಯಕ್ರಮ ನಿರೂಪಿಸಿದರು.

ಐಕಳ ಬಾವ ಕಾಂತಾಬಾರೆ – ಬೂದಾಬಾರೆ ಜೋಡುಕರೆ ಕಂಬಳ ಕೂಟದ ಫಲಿತಾಂಶ
ಕೂಟದಲ್ಲಿ ಭಾಗವಹಿಸಿದ ಒಟ್ಟು ಕೋಣಗಳ ಸಂಖ್ಯೆ 124

ಕನೆಹಲಗೆ: 3 ಜೊತೆ
ಅಡ್ಡಹಲಗೆ: 6 ಜೊತೆ
ಹಗ್ಗ ಹಿರಿಯ: 17 ಜೊತೆ
ನೇಗಿಲು ಹಿರಿಯ: 20 ಜೊತೆ
ಹಗ್ಗ ಕಿರಿಯ: 9 ಜೊತೆ
ನೇಗಿಲು ಕಿರಿಯ: 69 ಜೊತೆ

ಕನೆಹಲಗೆ:
ಬೇಲಾಡಿ ಬಾವ ಅಶೋಕ್ ಶೆಟ್ಟಿ ಓಡಿಸಿದವರು: ನಾರಾವಿ ಯುವರಾಜ ಜೈನ್
(6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)

ಹಗ್ಗ ಹಿರಿಯ:
ಪ್ರಥಮ: ಪದವು ಕಾನಡ್ಕ ಫ್ರಾನ್ಸಿಸ್ ಫ್ಲೇವಿ ಡಿಸೋಜ ಓಡಿಸಿದವರು: ಪಣಪಿಲು ಪ್ರವೀಣ್ ಕೋಟ್ಯಾನ್
ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ಹಗ್ಗ ಕಿರಿಯ:
ಪ್ರಥಮ: ಮಾಣಿ ಸಾಗು ಹೊಸಮನೆ ಉಮೇಶ್ ಮಹಾಬಲ ಶೆಟ್ಟಿ ಓಡಿಸಿದವರು: ಪಣಪಿಲು ಪ್ರವೀಣ್ ಕೋಟ್ಯಾನ್
ದ್ವಿತೀಯ: ಕಾಂತಾವರ ಅಂಬೋಡಿಮಾರ್ ರಘನಾಥ ದೇವಾಡಿಗ ಓಡಿಸಿದವರು: ನಕ್ರೆ ಮಂಜುನಾಥ ಭಂಡಾರಿ

ನೇಗಿಲು ಹಿರಿಯ:
ಪ್ರಥಮ: ಬೋಳದ ಗುತ್ತು ಜಗದೀಶ್ ಶೆಟ್ಟಿ ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್.ಒ.ಶೆಟ್ಟಿ
ದ್ವಿತೀಯ: ಬಿ.ಸಿ.ರೋಡ್ ಕೈಕುಂಜೆ ಕ್ಲಾಡಿ ಡಿಕ್ರೂಜ್ ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ

ನೇಗಿಲು ಕಿರಿಯ:
ಪ್ರಥಮ: ಮಿಜಾರು ಪ್ರಸಾದ್ ನಿಲಯ ಪ್ರಸಿದ್ದ ಶಕ್ತಿ ಪ್ರಸಾದ್ ಶೆಟ್ಟಿ ಓಡಿಸಿದವರು: ನತೀಶ್ ಬಾರಾಡಿ
ದ್ವಿತೀಯ: ಸಿದ್ದಕಟ್ಟೆ ಪೋಡುಂಬ ಹೊಸಮನೆ ಸರೋಜಿನಿ ಸಂಜೀವ ಶೆಟ್ಟಿ ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್.ಒ.ಶೆಟ್ಟಿ

ಅಡ್ಡಹಲಗೆ:
ಪ್ರಥಮ: ಮೇರಮಜಲ್ ಮಿಷನ್ ಗೋಡ್ವಿನ್ ವೆಲ್ವಿನ್ ವಾಸ್ ಓಡಿಸಿದವರು: ಸ್ರಾವ್ಯ ಗಂಗಯ್ಯ ಪೂಜಾರಿ
ದ್ವಿತೀಯ: ಪಾತಿಲ ಹೊಸಮನೆ ರವಿರಾಜ್ ಶೆಟ್ಟಿ ಓಡಿಸಿದವರು: ನಾರಾವಿ ಯುವರಾಜ್ ಜೈನ್

Aikala-27011901 Aikala-27011902 Aikala-27011903 Aikala-27011904